ಓ ಮೆಣಸೇ...

Update: 2016-12-04 18:27 GMT

*ನಗದು ರಹಿತ ಆರ್ಥಿಕತೆಯನ್ನು ಬಳಸಿ. ಕಾರ್ಡ್‌ಗಳನ್ನು ಬಳಸಿ
-ನರೇಂದ್ರ ಮೋದಿ, ಪ್ರಧಾನಿ
  ಅಂದರೆ, ನೋಟು ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬ ಅಧಿಕೃತ ಘೋಷಣೆಯೇ?
---------------------
  ಕರ್ನಾಟಕ ಸರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರ
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಗುಜರಾತ್‌ನಲ್ಲಿ ಘೋಷಣೆಯಾಗುತ್ತಿರುವ ಕಪ್ಪು ಹಣಗಳ ವಿವರಗಳನ್ನು ನೋಡಿದರೆ ತುಸು ಅನುಮಾನ.

---------------------
  ಇಂದು ವಿಶ್ವದಲ್ಲಿ ಧಾರ್ಮಿಕತೆ ಹೆಚ್ಚಾದಂತೆ ಕಾಣುತ್ತದೆ
-ಡಾ. ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
  ಆದುದರಿಂದಲೇ ಅನ್ಯಾಯ, ಹಿಂಸೆ ಕೂಡ ಹೆಚ್ಚಿರುವುದು.

---------------------
  ಮೋದಿ ಗೆದ್ದಿದ್ದೇ ಕ್ಪಪು ಹಣದಿಂದ
-ಎಚ್.ವಿಶ್ವನಾಥ್, ಕಾಂಗ್ರೆಸ್ ನಾಯಕ
  ತನ್ನಂತೆ ಉಳಿದವರು ಗೆಲ್ಲಬಾರದೆಂದು ಮುಂಜಾಗ್ರತೆ ವಹಿಸುತ್ತಿದ್ದಾರಂತೆ. 

---------------------

  ಒಂದು ಪಕ್ಷ ಕೈಕೊಟ್ಟಾಗ ಮತ್ತೊಂದು ಪಕ್ಷದ ಕೈ ಹಿಡಿಯಲೇ ಬೇಕು
-ಝಮೀರ್ ಅಹ್ಮದ್, ಶಾಸಕ
ಒಂದು ಪಕ್ಷ ಕೈ ಕೊಟ್ಟಾಗ, ಇನ್ನೊಂದು ಪಕ್ಷದ ಕಾಲು ಹಿಡಿಯಬೇಕು ಎಂದರೆ ಚೆನ್ನ.

---------------------
  ಯಡಿಯೂರಪ್ಪ ಅವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ
-ಕೆ.ಎಸ್.ಈಶ್ವರಪ್ಪ, ವಿ.ಪ.ವಿ.ನಾಯಕ
ಮುಂದೆ ತಾವೇ ತೋಡಿಟ್ಟ ಗುಂಡಿಗಳಿವೆಯಲ್ಲ, ಅವನ್ನು ದಾಟಿ ಗೆದ್ದರೆ ಮಾತ್ರ.

---------------------
  ಇಂದಿನ ಆಧುನಿಕ ಸಮಾಜದಲ್ಲಿ ಬ್ರಾಹ್ಮಣರನ್ನು ಗುರುತಿಸುವುದೇ ಕಷ್ಟ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಇದರಿಂದಾಗಿ ಕೃಷ್ಣ ಮಠದಲ್ಲಿ ಪಂಕ್ತಿ ಊಟಕ್ಕೆ ಸಮಸ್ಯೆಯಾಗಿರಬೇಕು ಅಲವೇ?
---------------------
  ಭಾರತದ ಎಲ್ಲಾ ಮುಸ್ಲಿಮರೂ ದೇಶಭಕ್ತರು
-ರಾಜನಾಥ್ ಸಿಂಗ್, ಕೇಂದ್ರ ಸಚಿವ
  ಅಂದರೆ ಉಳಿದ ಸಮುದಾಯದ ಎಲ್ಲರೂ ದೇಶಭಕ್ತರು ಅಲ್ಲವೇ?

  ಮಾನವ ಅಂಗಾಂಗಗಳು ರಾಷ್ಟ್ರೀಯ ಸಂಪತ್ತು
-ಜೆ.ಪಿ ನಡ್ಡಾ, ಕೇಂದ್ರ ಸಚಿವ
  ಅವೆಲ್ಲವನ್ನೂ ಬ್ಯಾಂಕಿಗೆ ಒಪ್ಪಿಸಬೇಕು ಎನ್ನುತ್ತೀರಾ?

---------------------
  ಚಿಕ್ಕವನಿದ್ದಾಗ ನಾನು ಕಳ್ಳಭಟ್ಟಿ ಮಾರುತ್ತಿದ್ದೆ
-ರುದ್ರಪ್ಪ ಲಮಾಣಿ, ಸಚಿವ
  ಈಗ ತುಸು ದೊಡ್ಡ ಮಟ್ಟದಲ್ಲಿ ಮಾರುತ್ತಿದ್ದೀರಿ, ಅಷ್ಟೇ ವ್ಯತ್ಯಾಸ.

---------------------
  ದೇಶದ ಏಕತೆಗಾಗಿ ಬಹಳ ತ್ಯಾಗ, ಹೋರಾಟ ಮಾಡಿದವರು ಬ್ರಾಹ್ಮಣರು
-ದಿನೇಶ್ ಗುಂಡೂರಾವ್, ಕಾಂಗ್ರೆಸ್ ನಾಯಕ
ಹೌದು. ದಲಿತರೆಲ್ಲ ಅವರ ತ್ಯಾಗ, ಹೋರಾಟದ ಫಲಾನುಭವಿಗಳು.

---------------------
  ರಾಷ್ಟ್ರಗೀತೆ ಹಾಡುವಾಗ ಎದ್ದು ನಿಂತುಕೊಂಡರೆ ಅದರಿಂದ ದೇಶಭಕ್ತಿ ಹೆಚ್ಚುತ್ತದೆಯೇ?
-ಅಸಾದುದ್ದೀನ್ ಉವೈಸಿ, ಸಂಸದ
  ಕನಿಷ್ಠ ನಿಮ್ಮ ಘನತೆಯಾದರೂ ಒಂದಿಷ್ಟು ಹೆಚ್ಚಬಹುದು. ಎದ್ದು ನಿಂತುಕೊಳ್ಳಿ.

---------------------
  ನಿತೀಶ್ ಕುಮಾರ್ ಎನ್‌ಡಿಎ ಸೇರ್ಪಡೆಗೆ ಮುಂದಾದರೆ ಸ್ವಾಗತಿಸುತ್ತೇನೆ
-ರಾಮ್‌ ವಿಲಾಸ್ ಪಾಸ್ವಾನ್, ಸಂಸದ
  ಬಿಹಾರದ ಡಿಎನ್‌ಎ ಪರೀಕ್ಷೆಯನ್ನು ಮತ್ತೊಮ್ಮೆ ಮಾಡಬೇಕಾಗುತ್ತದೆಯೇ?
---------------------
  ಆಡಳಿತ ವೈಖರಿಯಲ್ಲಿ ನರೇಂದ್ರ ಮೋದಿ ತುಘಲಕ್ ಮತ್ತು ಹಿಟ್ಲರ್‌ನನ್ನು ಮೀರಿಸುತ್ತಿದ್ದಾರೆ.
-ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ
  ತಮ್ಮ ಹೊಗಳಿಕೆಗೆ ಮೋದಿ ಪುಳಕಿತರಾಗಿದ್ದಾರೆ.

---------------------
  ಮೋದಿ ಮತ್ತು ಸಿದ್ದರಾಮಯ್ಯ ಅಣ್ಣ ತಮ್ಮಂದಿರು
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
  ನೀವು ಅವರಿಗೆ ಸೋದರಮಾವ ಆಗಬೇಕೇ?
  
ಕಂಬಳ ಪುನಾರಂಭಕ್ಕೆ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಲಾಗುವುದು
-ಡಾ.ಜಿ ಪರಮೇಶ್ವರ್, ಸಚಿವ
  ಕಾವೇರಿಯ ವಾದದ ಕತೆ ಏನಾಯಿತು ಅದನ್ನು ಹೇಳಿ.

---------------------
  ಜನ್ಮ ನೀಡಿದ ತಾಯಿ, ಹಾಲು ಕೊಟ್ಟ ಹಸು, ಅನ್ನ ನೀಡುವ ಭೂಮಿಯನ್ನು ಜನ ಮರೆಯುತ್ತಿರುವುದು ತುಂಬಾ ನೋವಿನ ಸಂಗತಿ
-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
 ಜನ್ಮ ನೀಡಿದ ತಾಯಿಯ ಹೆಸರು ಹೇಳಿ ಅವಳ ಸೆರಗಿಗೆ ಕೈಹಾಕುವವರ ಕುರಿತಂತೆ ಏನಾದರೂ ಹೇಳಿ.

---------------------
  ಭಾರತ್ ಮಾತಾಕಿ ಜೈ ಎನ್ನುವವರನ್ನು ಜೈಲಿಗೆ ಕಳಿಸಲಾಗುತ್ತದೆ, ದೇಶದ್ರೋಹಿಗಳನ್ನು ಬೀಗರಂತೆ ನೋಡಲಾಗುತ್ತದೆ
-ಸಿ.ಟಿ. ರವಿ, ಶಾಸಕ
  ಜೈ ಎಂದು ದೇಶಕ್ಕೆ ಕನ್ನ ಹಾಕುವವರನ್ನು ದೇಶಭಕ್ತರೆಂದು ಬಿಂಬಿಸಲಾಗುತ್ತಿರುವುದು ವಿಪರ್ಯಾಸ.

---------------------
  ನಮ್ಮನ್ನಾಳಿದ ಬ್ರಿಟಿಷರು ಎಷ್ಟೋ ವಾಸಿ
-ಕಾಗೋಡು ತಿಮ್ಮಪ್ಪ, ಸಚಿವ
  ಅದಕ್ಕೇ ಅವರು ಹಿಂಬಾಗಿಲಿನಿಂದ ಮತ್ತೆ ಭಾರತ ಪ್ರವೇಶಿಸಿದ್ದಾರೆ.

---------------------
  ಸಾಯುತ್ತೇನೆ ಎಂಬ ಭಯದಿಂದ ಜನರು ಸರಕಾರಿ ಆಸ್ಪತ್ರೆಗಳಿಗೆ ಹೋಗುತ್ತಿಲ್ಲ
-ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ
  ಅವರೆಲ್ಲ ಈಗ ಎಟಿಎಂ ಮುಂದೆ ಸಾಯುತ್ತಿದ್ದಾರೆ.
---------------------
  ಅಮೆರಿಕವನ್ನು ಒಂದು ಬಿಸಿನೆಸ್‌ನಂತೆ ನಡೆಸುವ ಕಾಲ ಬಂದಿದೆ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
  ಆದರೆ ಅದನ್ನು ಕೊಳ್ಳುವವರು ಯಾರೂ ಇಲ್ಲ, ಅದೇ ಸಮಸ್ಯೆ.

---------------------
  ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ
  ಮೊಸರಲ್ಲಿ ಹೊಸ ಎರಡು ಸಾವಿರದ ನೋಟು ಪತ್ತೆಯಾಗಿರುವ ಬಗ್ಗೆ ಏನಾದರೂ ಹೇಳಿ.

---------------------
  ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ನನಗಿದೆ
-ಡಿ.ಕೆ.ಶಿವಕುಮಾರ್, ಸಚಿವ
  ಆದುದರಿಂದಲೇ ನೀವು ಸಚಿವರಾಗಿದ್ದೀರಿ ಬಿಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...