×
Ad

ಹಳೆ ನೋಟು ಕೊಡುವುದಾಗಿ ವಂಚಿಸಿದ ಆರೋಪಿ ಪೊಲೀಸ್ ವಶಕ್ಕೆ

Update: 2016-12-05 19:16 IST
ಸಾಂದರ್ಭಿಕ ಚಿತ್ರ

ಚಿತ್ರದುರ್ಗ , ಡಿ.5 : ಹಳೆ ನೋಟು ಕೊಡುವುದಾಗಿ ಉದ್ಯಮಿಗಳಿಂದ ಸುಮಾರು 58 ಲಕ್ಷ ರೂ.  ಮೌಲ್ಯದ ಹೊಸ ನೋಟುಗಳನ್ನು ಪಡೆದು ವಂಚಿಸಿದ್ದ ವ್ಯಕ್ತಿಯನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಪಾವಗಡ ಮೂಲದ ರಾಮಕೃಷ್ಣ ಎಂದು ತಿಳಿದು ಬಂದಿದೆ.

ಮೊಹಿದ್ದೀನ್ ಮತ್ತು ಮಲ್ಲೇಶಪ್ಪ ಎಂಬ ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

1ಕೋಟಿ ರೂ ಹಳೇ ನೋಟು ಕೊಡುವುದಾಗಿ ಚಳ್ಳಕೆರೆಯ ಉದ್ಯಮಿಗಳಿಂದ  2000 ರೂ. ಮುಖಬೆಲೆಯ  58ಲಕ್ಷ  ಹೊಸ  ನೋಟು ಪಡೆದಿದ್ದ ಆರೋಪಿಗಳು, 60ಲಕ್ಷಕ್ಕೆ 1ಕೋಟಿ ರೂ ಹಳೆ ನೋಟು ಕೊಡುವುದಾಗಿ ನಂಬಿಸಿ, ಬರೀ ಬಿಳಿ ಪೇಪರ್ ಗಳನ್ನು ನೀಡಿ ವಂಚಿಸಿದ್ದರು.

ಚಳ್ಳಕೆರೆ ಸಿಪಿಐ ಸಮೀವುಲ್ಲಾ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ  ಆರೋಪಿ ರಾಮಕೃಷ್ಣ ಸಹಿತ 2000ಮುಖಬೆಲೆಯ 30ಲಕ್ಷ, 30ಸಾವಿರ ರೂ. ಸೇರಿದಂತೆ ಒಟ್ಟು 37ಲಕ್ಷ 30ಸಾವಿರ ರೂ. ನ್ನು ವಶಕ್ಕೆ ಪಡೆಯವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News