‘ಜನನುಡಿ’
Update: 2016-12-05 23:54 IST
ಮಂಗಳೂರಿನಲ್ಲಿ ಡಿ.24 ಮತ್ತು 25ರಂದು ನಡೆಯಲಿರುವ ‘ಜನನುಡಿ’ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಸೋಮವಾರ ಮಂಗಳೂರಿನ ವಿಕಾಸ ಕಚೇರಿಯಲ್ಲಿ ವಿಚಾರವಾದಿ ಡಾ.ನರೇಂದ್ರ ನಾಯಕ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಡಾ.ನಾಗಪ್ಪ ಗೌಡ, ಎಂ.ದೇವದಾಸ್, ವಾಸುದೇವ ಉಚ್ಚಿಲ್, ದಿನೇಶ್ ಹೆಗ್ಡೆ ಉಳೆಪಾಡಿ, ಮುನೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.