ಎಸ್‌ಡಿಪಿಐ ಜಿಲ್ಲಾಧ್ಯಕ್ಷ, ಕಾರ್ಯಕರ್ತರ ಬಂಧನಕ್ಕೆ ಖಂಡನೆ
Update: 2016-12-06 20:26 IST
ಬೆಂಗಳೂರು, ಡಿ. 6: ಬಾಬ್ರಿ ಮಸೀದಿಯ ಧ್ವಂಸಗೊಂಡು 24 ವರ್ಷ ಕಳೆದರೂ ಇನ್ನೂ ಸರಕಾರ ಮಸೀದಿಯನ್ನು ಮರುಸ್ಥಾಪಿಸುವಂತೆ, ಧ್ವಸಗೊಳಿಸಿದ ಆರೋಪಿಗಳ ಬಂಧನಕ್ಕೆ ಮತ್ತು ಲಿಬಾರ್ಹಾನ್‌ಆಯೋಗದ ವರದಿ ಜಾರಿಗೆ ಒತ್ತಾಯಿಸಿ ‘ಬಾಬ್ರಿ ಮಸೀದಿ ಪುನರ್ ನಿರ್ಮಿಸಿ-ಜಾತ್ಯಾತೀತತೆ ಮರುಸ್ಥಾಪಿಸಿ’ ಎಂಬ ಘೋಷನೆಯೊಂದಿಗೆ ಇಂದು ಚಾಮನಗರ ಜಿಲ್ಲೆಯಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹ್ಮದ್ ಹಾಗೂ 104 ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ಇಂಡಿಯಾ (ಎಸ್‌ಡಿಪಿಐ) ತೀವ್ರವಾಗಿ ಖಂಡಿಸಿದೆ.
ಪೊಲೀಸರ ಈ ಕ್ರಮವು ಸಂಧಾನಾತ್ಮಕ ಪ್ರತಿಭಟನೆಯ ಹಕ್ಕುಗಳನ್ನು ಕಸಿಯುವ ಪ್ರಯತ್ನವಾಗಿದೆ ಮತ್ತು ಈ ಮೂಲಕ ಜನಸಾಮಾನ್ಯರ ಹೋರಾಟದ ಹಕ್ಕುಗಳನ್ನು ಕಸಿಯುವಂತ ಪ್ರಯತ್ನವನ್ನು ಸರಕಾರಗಳು ಪೊಲೀಸರ ಮುಖಾಂತರ ನಡೆಸುತ್ತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಆರೋಪಿಸಿದ್ದಾರೆ.