×
Ad

ಸವಿತಾ ಸಮಾವೇಶ: ಬೈಕ್ ರ್ಯಾಲಿಗೆ ಚಾಲನೆ

Update: 2016-12-06 23:36 IST

ಸುಳ್ಯ, ಡಿ.6: ಸುಳ್ಯದಲ್ಲಿ ಡಿ.13ರಂದು ನಡೆಯುವ ಸವಿತಾ ಸಮ್ಮೇಳನದ ಪ್ರಚಾರಾರ್ಥವಾಗಿ ಸವಿತಾ ಸಂಚಾರ ಬೈಕ್ ರ್ಯಾಲಿ ಸುಳ್ಯ ಚೆನ್ನಕೇಶವ ದೇವಸ್ಥಾನದಿಂದ ಆರಂಭಗೊಂಡಿದೆ.

ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಹಾಗೂ ಸುಳ್ಯ ಸರ್ಕಲ್ ಇನ್‌ಸ್ಪೆೆಕ್ಟರ್ ಕೃಷ್ಣಯ್ಯ ರ್ಯಾಲಿಗೆ ಚಾಲನೆ ನೀಡಿದರು. ಸವಿತಾ ಸಮಾವೇಶದ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಮಾರು 50ಕ್ಕೂ ಹೆಚ್ಚು ಬೈಕ್‌ಗಳು ರ್ಯಾಲಿಯಲ್ಲಿ ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News