×
Ad

2000ರೂ. ಮುಖಬೆಲೆಯ ಲಕ್ಷಾಂತರ ಅಕ್ರಮ ಹಣ ಪೊಲೀಸ್ ವಶಕ್ಕೆ

Update: 2016-12-07 18:39 IST

ಕಾರವಾರ, ಡಿ.7 : ಅಕ್ರಮವಾಗಿ ಸಾಗಿಸಲಾಗುತ್ತಿದ್ದ 37.78 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡು, ಒಬ್ಬ ವ್ಯಕ್ತಿಯನ್ನು ಬಂಧಿಸಿದ ಘಟನೆ ಹೊನ್ನಾವರ ತಾಲೂಕಿನಲ್ಲಿ ಬುಧವಾರ ಸಂಭವಿಸಿದೆ.

 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಅಬ್ದುಲ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಯಾವುದೇ ದಾಖಲೆಗಳಲ್ಲಿದ 2 ಸಾವಿರ ರೂ. ಮುಖಬೆಲೆಯ 32 ಲಕ್ಷ ರೂ. ಹಾಗೂ ಉಳಿದ ಹಣ 100 ರೂ. ಮುಖ ಬೆಲೆಯ ಹಣವನ್ನು ಶಿವಮೊಗ್ಗೆ ಜಿಲ್ಲೆಯ ಸಾಗರ ತಾಲೂಕಿನಿಂದ ಉತ್ತರ ಕನ್ನಡ ಜಿಲ್ಲೆಯ  ಹೊನ್ನಾವರ ತಾಲೂಕಿನತ್ತ ಸಾಗಿಸುತ್ತಿದ್ದ.

ಈ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಹೊನ್ನಾವರ ಪೊಲೀಸರು ಕಾರ್ಯಾಚರಣೆ ನಡೆಸಿ ದಾಳಿ ಮಾಡಿ ಹಣ ಜಪ್ತಿ ಮಾಡಿಕೊಂಡಿದ್ದಾರೆ. 

ಹೆಚ್ಚಿನ ಪ್ರಮಾಣದಲ್ಲಿ 2 ಸಾವಿರ ರೂ. ಮುಖಬೆಲೆಯ ಹಣವಿದ್ದು , ಯಾರಿಗೆ ಸೇರಿದ್ದು ಹಾಗೂ ಈ ಕೃತ್ಯದ ಹಿಂದಿರುವ ವ್ಯಕ್ತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News