ಯೋಧನ ಅನುಮಾನಾಸ್ಪದ ಸಾವು
Update: 2016-12-07 20:19 IST
ಮೈಸೂರು, ಡಿ.7 : ಹಸೆಮಣೆ ಏರಬೇಕಿದ್ದ ಯೋಧನೊಬ್ಬ ಅನುಮಾನಾಸ್ಪವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕೆ.ಆರ್.ನಗರ ತಾಲೂಕು ಕನಗನಹಳ್ಳಿಯಲ್ಲಿ ಯ ಪ್ರತೀಪ್ (27) ಮೃತಪಟ್ಟ ಯೋಧ. ಎದೆ ನೋವಿನ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರತೀಪ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ವಿಷಪ್ರಾಶನವಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ ಎಂದು ಹೇಳಲಾಗಿದೆ..
ಪ್ರತೀಪ್ ಕಳೆದ ಭಾನುವಾರವಷ್ಟೆ ಮದುವೆ ನಿಶ್ಚಿತಾರ್ಥ ನಡೆದಿತ್ತು .ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.