×
Ad

ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Update: 2016-12-08 23:32 IST

ಸುಂಟಿಕೊಪ್ಪ, ಡಿ.8: ಕೊಳೆತು ನಾರುತ್ತಿರುವ ವ್ಯಕ್ತಿಯೋರ್ವನ ಮೃತ ದೇಹ ಇಲ್ಲಿಗೆ ಸಮೀಪದ ಕಾಂಡನಕೊಲ್ಲಿ ತೋಟದಲ್ಲಿ ಪತ್ತೆಯಾಗಿದೆ.
ಶವವನ್ನು ಪಾಪ್ಲಿಕಾಡ್ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ಕಾರ್ಮಿಕ ಪುಕ್ಕ ಎಂಬವರ ಪುತ್ರ ವಿಜಯ (30) ಎಂದು ಗುರುತಿಸಲಾಗಿದೆ.


ಶನಿವಾರ ಸಂಜೆ ಮನೆಯಿಂದ ಕಾಂಡನಕೊಲ್ಲಿಗೆ ತೆರಳುವುದಾಗಿ ಹೋದ ವಿಜಯ ಮನೆಗೆ ಮರಳದೆ 5 ದಿನಗಳ ಬಳಿಕ ಕಾಂಡನಕೊಲ್ಲಿಯ ಕಾಫಿ ತೋಟದ ಬುಡದಲ್ಲಿ ಕೊಳೆತ ಶವವಾಗಿ ಪತ್ತೆಯಾಗಿದ್ದಾನೆ.
ಸ್ಥಳೀಯ ನಿವಾಸಿಗಳು ಸುಂಟಿಕೊಪ್ಪಪೊಲೀಸರಿಗೆ ದೊರೆತ ಮಾಹಿತಿ ಹಿನ್ನೆಲೆ ಠಾಣಾಧಿಕಾರಿ ಅನೂಪ್ ಮಾದಪ್ಪಹಾಗೂ ಸಿಬ್ಬಂದಿ ಮೃತ ದೇಹವನ್ನು ಪರಿಶೀಲಿಸಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆಗೆ ಕ್ರಮ ಕೈಗೊಂಡಿದ್ದಾರೆ.
ಮೃತ ಶರೀರವನ್ನು ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News