×
Ad

ಕಲಬುರಗಿ: ಬಿಜೆಪಿ ಕಾರ್ಯಕರ್ತರ ಪರಸ್ಪರ ಹೊಡೆದಾಟ

Update: 2016-12-09 14:45 IST

ಕಲಬುರಗಿ, ಡಿ.9: ಬಿಜೆಪಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಕಲಬುರಗಿಯ ಎಂಎಲ್ಸಿ ಅಮರನಾಥ ಪಾಟೀಲ್ ಮನೆಯೆದುರು ನಡೆದಿದೆ.

ಬಿಜೆಪಿ ಕಾರ್ಯಕರ್ತರು ಅಮರನಾಥ ಪಾಟೀಲ್ ಮನೆ ಹೊರಗಡೆ ಪ್ರತಿಭಟನೆ ನಡೆಸುತ್ತಿರುವ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮುಕುಂದ ದೇಶಪಾಂಡೆ ಉಚ್ಛಾಟನೆ ಬಗ್ಗೆ ಬಿಜೆಪಿ ಹಿಂದುಳಿದ ವರ್ಗದ ಮುಖಂಡ ಶರಣಪ್ಪ ತಳವಾರ ಪ್ರಶ್ನಿಸಿದ್ದಾರೆ. ಇದರಿಂದ ನೂತನವಾಗಿ  ಆಯ್ಕೆಯಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ  ಬಿರಾದಾರ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News