‘ಅನ್ನಭಾಗ್ಯ’ದ ಅಕ್ರಮ ದಾಸ್ತಾನು ವಶ: ಪ್ರಕರಣ ದಾಖಲು
Update: 2016-12-09 22:39 IST
ದಾವಣಗೆರೆ, ಡಿ.9: ತಾಲೂಕಿನ ದೊಡ್ಡಬಾತಿಯ ದರ್ಗಾದ ಬಳಿ ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ.
ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಅನ್ನಭಾಗ್ಯ ಯೋಜನೆಯ 112 ಕ್ವಿಂಟಾಲ್ ಅಕ್ಕಿ, 1.5 ಕ್ವಿಂಟಾಲ್ ರಾಗಿಯನ್ನು ವಶಪಡಿಸಿಕೊಂಡಿದೆ.
ತಾಲೂಕಿನ ರೈಸ್ ಮಿಲ್ ಮಾಲಕ ಉಮಾಪತಿ ಎಂಬವರು ತನ್ನ ತೋಟದಲ್ಲಿ ಅಕ್ರಮವಾಗಿ ಶೇಖರಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಅರಿತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿ ಅಕ್ಕಿ ಹಾಗೂ ರಾಗಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದೂರು ದಾಖಲಿಸಿಕೊಂಡಿದೆ.