ಮಾನಭಂಗ ಯತ್ನ
Update: 2016-12-09 22:39 IST
ಬಂಟ್ವಾಳ, ಡಿ.9: ತಾಲೂಕಿನ ಸಜಿಪನಡು ಗ್ರಾಮದಲ್ಲಿ ಪಾನಮತ್ತ ಹಾಗೂ ಗಾಂಜಾ ವ್ಯಸನಿಯೋರ್ವ ಮಧ್ಯವಯಸ್ಕ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ನಡೆದಿದೆ.
ಬುಧವಾರ ಮಧ್ಯರಾತ್ರಿ ಸ್ಥಳೀಯ ನಿವಾಸಿ ಸಿದ್ದಿಕ್ (30) ತನ್ನದೇ ಊರಿನ 52 ವರ್ಷದ ಒಂಟಿಯಾಗಿ ವಾಸಿಸುವ ಮಹಿಳೆಯೋರ್ವಳ ಮನೆಗೆ ಆಗಮಿಸಿ ಬಾಗಿಲು ಬಡಿದಿದ್ದಾನೆ. ಶಬ್ದ ಕೇಳಿ ಬಾಗಿಲು ತೆರೆದಾಗ ಬಲಾತ್ಕಾರವಾಗಿ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದು, ಮಹಿಳೆ ಬೊಬ್ಬೆ ಹಾಕಿದಾಗ ಆರೋಪಿ ಓಡಿದಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.