×
Ad

ತಲೆಮರೆಸಿಕೊಂಡಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕ ಬಂಧನ

Update: 2016-12-11 11:33 IST

ಕಲಬುರಗಿ, ಡಿ.11: ಕಾರು ಚಾಲಕ ರಮೇಶ್ ಗೌಡ ಆತ್ಮಹತ್ಯೆಯ ಬಳಿಕ ತಲೆ ಮರೆಸಿಕೊಂಡಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕೆರನ್ನು ಮಂಡ್ಯ ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರವಿವಾರ ಬೆಳಗ್ಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ವಿಶೇಷ ಭೂಸ್ವಾಧೀನಧಿಕಾರಿಯಾಗಿದ್ದ ಭೀಮಾ ನಾಯ್ಕಾ ಬಳಿ ಕಾರು ಚಾಲಕರಾಗಿದ್ದ ರಮೇಶ್ ಗೌಡ ಡೆತ್‌ನೋಟ್ ಬರೆದಿಟ್ಟು ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಡಿ.6 ರಿಂದ ಭೀಮಾ ನಾಯ್ಕೆ ತಲೆ ಮೆರೆಸಿಕೊಂಡಿದ್ದರು.

ಭೀಮಾ ನಾಯ್ಕರನ್ನು ಬಂಧಿಸಲಾಗಿದೆ ಎಂದು ಕಲಬುರಗಿ ಪೊಲೀಸರು ಮಧ್ಯಮಗಳಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News