×
Ad

ಮೇಟಿ ವಿರುದ್ದ ಆರೋಪ ಸಾಬೀತಾದರೆ ಕ್ರಮ: ಪರಮೇಶ್ವರ್

Update: 2016-12-11 14:59 IST

 ಬಾಗಲಕೋಟೆ, ಡಿ.11: ‘‘ಆರ್‌ಟಿಐ ಕಾರ್ಯಕರ್ತ ರಾಜಶೇಖರ್‌ಗೆ ತನ್ನ ಬೆಂಬಲಿಗರ ಮೂಲಕ ಬೆದರಿಕೆ ಹಾಕಿದ ಆರೋಪ ಸಾಬೀತಾದರೆ ಅಬಕಾರಿ ಸಚಿವ ಎಚ್‌.ವೈ. ಮೇಟಿ ವಿರುದ್ಧ ಕೆಪಿಸಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ’’ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

‘‘ಆರ್‌ಟಿಐ ಕಾರ್ಯಕರ್ತ ರಾಜಶೇಖರ್‌ಗೆ ಮೇಟಿ ಬೆಂಬಲಿಗರು ಬೆದರಿಕೆ ಹಾಕಿರುವ ಬಗ್ಗೆ ತನಗೇನೂ ಗೊತ್ತಿಲ್ಲ. ಮೇಟಿ ವಿರುದ್ಧ ಯಾವುದೇ ಸಿಡಿ ಬಗ್ಗೆಯೂ ಮಾಹಿತಿಯಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ’’ ಎಂದು ಪರಮೇಶ್ವರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News