×
Ad

''ಸಚಿವ ಮೇಟಿ ನನ್ನ ಮಧ್ಯೆ ತಂದೆ ಮಗಳ ಸಂಬಂಧ ''

Update: 2016-12-11 22:34 IST

ಬೆಂಗಳೂರು, ಡಿ.11: ''ಸಚಿವ ಎಚ್.ವೈ ಮೇಟಿ ಮತ್ತು ನನ್ನ ಮಧ್ಯೆ ಬೇರೆ ಸಂಬಂಧವಿಲ್ಲ. ನನ್ನದು ತಂದೆ ಮಗಳ ಸಂಬಂಧ. ಅವರು ಮೊದಲೇ ಸಂಬಂಧಿಕರು. ಸಚಿವರಾಗುವ ಮೊದಲೇ ಒಳ್ಳೆಯ ಬಾಂಧವ್ಯ ಹೊಂದಿದ್ದರು'' ಎಂದು ಸಂತ್ರಸ್ತ ಮಹಿಳೆ ಸ್ಪಷ್ಟನೆ ನೀಡಿದ್ದಾರೆ.
  ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆ ಮಹಿಳೆ "ಸಚಿವ ಮೇಟಿ ಸಂಬಂಧಿಯಾಗಿ ಕುಟುಂಬದ ಜೊತೆ ಸೋದರ ಸಂಬಂಧ ಹೊಂದಿದ್ದಾರೆ. ನಮ್ಮ ನಡುವೆ ಬೇರೆ ಸಂಬಂಧ ಇಲ್ಲ’’ ಎಂದು ಹೇಳಿದ್ದಾರೆ.
 ಸಚಿವರ ಸಂಬಂಧಿತ ಸುದ್ದಿ ನೋಡಿ ಬೇಸರವಾಗಿದೆ. ನನಗೆ ಜೀವ ಬೆದರಿಕೆ ಇದೆ. ಎಲ್ಲವನ್ನು ಎರಡು ದಿನಗಳ ಒಳಗಾಗಿ ತಿಳಿಸುವೆ '' ಎಂದು ಸಂತ್ರಸ್ತ ಮಹಿಳೆ ಸ್ಪಷ್ಟಪಡಿಸಿದ್ದಾರೆ. 
ಸಿಡಿ ನನ್ನ ಕೈಯಲ್ಲಿ ಇಲ್ಲ: ''ಸಚಿವರ ಲೈಂಗಿಕ ದೌರ್ಜನ್ಯದ ಸಿಡಿ ನನ್ನ ಬಳಿ ಇಲ್ಲ. ಇಪ್ಪತ್ತು ದಿನ ಹಿಂದೆ ಸಿಡಿ ನೋಡಿದ್ದೆ. ನನಗೆ ಸಿಡಿ ಇಂದು ತಲುಪಿಸುತ್ತಾರೆಂದು ಹೇಳಿದರು. ಆದರೆ ಸಿಡಿ ನನಗೆ ಸಿಕ್ಕಿಲ್ಲ ''ಎಂದು  ಸಚಿವ ಎಚ್‌ವೈ ಮೇಟಿ ವಿರುದ್ಧ ರಾಸಲೀಲೆ ಆರೋಪ ಮಾಡಿದ್ದ  ಬಳ್ಳಾರಿ ಮೂಲದ ಆರ‍್ ಟಿಎ ಕಾರ್ಯಕರ್ತ ರಾಜಶೇಖರ‍್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News