ಓ ಮೆಣಸೇ....

Update: 2016-12-11 18:53 GMT

  ಸಾಹಿತ್ಯ ಸಮ್ಮೇಳನ ರಾಜಕೀಯ ಸಮ್ಮೇಳನ ಅಲ್ಲ
- ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ
  ಸಾಹಿತಿಗಳ ಮಾತುಗಳು ಕೇಳಿದರೆ ಹಾಗೆ ಅನ್ನಿಸೋದಿಲ್ಲ.
---------------------
  ಕನ್ನಡಿಗರ ಡೋಂಗಿತನದಿಂದ ಕನ್ನಡ ಅನಾಥವಾಗಿದೆ
- ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ಕರ್ನಾಟಕದಲ್ಲಿ ಬಿಜೆಪಿ ಅನಾಥವಾಗಿರುವುದು ಯಾರ ಢೋಂಗಿತನದಿಂದ?
---------------------
  ಪ್ರಧಾನಿ ಮೋದಿ ತಮ್ಮ ವರ್ಚಸ್ಸು ಹಾಗೂ ಪ್ರತಿಷ್ಠೆಯನ್ನು ಹೆಚ್ಚಿಸಲು ನೋಟು ಬ್ಯಾನ್ ಮಾಡಿದ್ದಾರೆ
- ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವ
  
ನೀವು ಮಹಾಕಾವ್ಯ ಬರೆಯೋದನ್ನು ನಿಷೇಧಿಸಿ, ರಾಹುಲ್‌ಗಾಂಧಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಯೋಜನೆ ಹಾಕಿದ್ದಾರಂತೆ.

---------------------
  ಭಾರತದಲ್ಲಿ ನಗದು ರಹಿತ ವಹಿವಾಟು ಅಸಾಧ್ಯ
- ದೇವೇಗೌಡ, ಮಾಜಿ ಪ್ರಧಾನಿ
  ಸ್ಮಾರ್ಟ್ ಫೋನ್ ಉಪಯೋಗಿಸಲು ಬರದವರ ಗೋಳು.

---------------------
  ರಾಯಣ್ಣ ಬ್ರಿಗೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ
- ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ
  ಈಶ್ವರಪ್ಪರಿಗೂ ಬಿಜೆಪಿಗೂ ಏನು ಸಂಬಂಧ ಎನ್ನೋ ಪ್ರಶ್ನೆ ಎದ್ದಿದೆ.
---------------------
  ದತ್ತ ಪೀಠ ಹಿಂದೂಗಳ ಪ್ರಮುಖ ಆಸ್ತಿ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ವಿವಾದ, ಸಂಘರ್ಷಗಳಿರುವ ಸ್ಥಳಗಳೆಲ್ಲ ಈಗ ಸಂಘಪರಿವಾರದ ಆಸ್ತಿಯೇ ಆಗಿದೆ.

---------------------
  ಎತ್ತಿನಹೊಳೆ ವಿರೋಧಿ ಹೋರಾಟಕ್ಕಾಗಿ ಸಂದರ್ಭ ಬಂದರೆ ರಾಜೀನಾಮೆಗೂ ಸಿದ್ಧ
-ನಳಿನ್ ಕುಮಾರ್ ಕಟೀಲು, ಸಂಸದ
  ಮೊದಲು ಯೋಜನೆ ಜಾರಿ ಮಾಡಿದ ಬಿಜೆಪಿ ನಾಯಕರ ವಿರುದ್ಧ ಹೋರಾಟಕ್ಕಿಳಿಯಿರಿ.

---------------------
  ಸಂಗೀತಗಾರರೇ ಪ್ರಾಧ್ಯಾಪಕರಾದರೆ ಸಂಗೀತ ವಿವಿ ಉಳಿದೀತು
-ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ
  ಇಲ್ಲದಿದ್ದರೆ ರಾಷ್ಟ್ರ ಒಡೆಯುವುದಕ್ಕೊಬ್ಬ ರಾಷ್ಟ್ರೀಯ ಪ್ರೊಫೆಸರ್‌ನ್ನು ನೇಮಕ ಮಾಡಿದಂತಾದೀತು.
---------------------
  ಕೆಲವರು ದಲಿತರಿಗೆ ಇಲ್ಲಸಲ್ಲದ್ದನ್ನು ಹೇಳಿ ದಿಕ್ಕು ತಪ್ಪಿಸಿ ಬಿಜೆಪಿ-ಆರೆಸ್ಸೆಸ್‌ನಿಂದ ದೂರ ಮಾಡುತ್ತಿದ್ದಾರೆ
-ರಘುಪತಿ ಭಟ್, ಮಾಜಿ ಶಾಸಕ
  ನೀವು ಅವರನ್ನು ಹತ್ತಿರ ಮಾಡಿದ್ದು ಕೂಡ ಇಲ್ಲಸಲ್ಲದ್ದನ್ನು ಹೇಳುವ ಮೂಲಕವೇ ಅಲ್ಲವೆ?
---------------------
  ಅಗತ್ಯ ಬಿದ್ದರೆ ಗೋ ರಕ್ಷಣೆಗೆ ಸಂತರು ಪೊಲೀಸ್ ಠಾಣೆಗೆ ಹೋಗಲೂ ಹಿಂಜರಿಯಬಾರದು
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಈಗಾಗಲೇ ಜೈಲಿಗೆ ಹೋಗುವುದರಿಂದ ಸ್ವಲ್ಪದರಲ್ಲಿ ಪಾರಾದವರಲ್ಲವೆ? ಅನುಭವದ ಫಲ.

---------------------
  ಶೀಘ್ರದಲ್ಲೇ ಎಐಎಡಿಎಂಕೆ ಇಬ್ಭಾಗವಾಗಲಿದೆ
- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
  ಅಂದರೆ ಅದರಲ್ಲಿ ಬಿಜೆಪಿಯ ಪಾತ್ರ ಇದೆಯೆಂದಾಯಿತು.

---------------------
  ಡಾ.ಅಂಬೇಡ್ಕರ್ ಆಶಯದಂತೆ ನರೇಂದ್ರ ಮೋದಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದಾರೆ
- ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಪ್ರ.ಕಾರ್ಯದರ್ಶಿ
  ಅಂಬೇಡ್ಕರ್ ಆಶಯದಂತೆ ಮೀಸಲಾತಿಯನ್ನು ರದ್ದು ಮಾಡುವುದು ನಿಮ್ಮ ಮುಂದಿನ ಯೋಜನೆ ಆಗಿರಬಹುದೆ?
---------------------
  ನೋಟು ರದ್ದತಿಯಿಂದ ಮೋದಿ ಫಕೀರನಾಗಿಲ್ಲ. ಬದಲಿಗೆ ದೇಶದ ಶೇ.90ರಷ್ಟು ಜನ ಫಕೀರರಾಗಿದ್ದಾರೆ
- ಮಾಯಾವತಿ, ಬಿಎಸ್ಪಿ ಅಧ್ಯಕ್ಷೆ
  ಮುಂದಿನ ದಿನಗಳಲ್ಲಿ ಚುನಾವಣಾ ಖರ್ಚಿಗೆ ಆರೆಸ್ಸೆಸ್ ಬ್ಯಾಂಕಿನಿಂದ ಬಡ್ಡಿಗೆ ಸಾಲ ಪಡೆಯಬೇಕಾದ ಸ್ಥಿತಿ.

---------------------
  ಗಾಲಿ ಜನಾರ್ದನ ರೆಡ್ಡಿ ಬಿಜೆಪಿಯವರೇ ಅಲ್ಲ
- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
  ಗಾಳಿಯಿಲ್ಲ ಗಾಲಿ ಇದ್ದೇನು ಪ್ರಯೋಜನ ಅಲ್ಲವೆ?
---------------------
  ಚುನಾವಣೆ ಎಂದಾಕ್ಷಣ ಹಣ ಮತ್ತು ಹೆಂಡ ನೆನಪಾಗುತ್ತದೆ
- ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ
  ಬರೇ ಅಷ್ಟಕ್ಕಾಗಿ ನೀವು ಚುನಾವಣೆಗೆ ನಿಲ್ಲುವುದೇ?
---------------------
  ಆಯುರ್ವೇದದಿಂದ ಭಾರತಕ್ಕೆ ವಿಶ್ವ ಸ್ಥಾನಮಾನ ದೊರೆತಿದೆ
- ಜಗದೀಶ್ ಶೆಟ್ಟರ್, ವಿ.ಸ.ಪ್ರತಿಪಕ್ಷ ನಾಯಕ
  ಬರೇ ಸ್ಥಾನಮಾನದಿಂದ ಏನು ಪ್ರಯೋಜನ, ಜನರ ಆರೋಗ್ಯದ ಪ್ರಮಾಣದಲ್ಲೂ ಏರಿಕೆಯಾಗಬೇಕಲ್ಲ?
---------------------
  ನೋಟು ನಿಷೇಧ ಭ್ರಷ್ಟರ ವಿರುದ್ಧ ಯಜ್ಞ
- ನರೇಂದ್ರ ಮೋದಿ, ಪ್ರಧಾನಿ
  ಜನಸಾಮಾನ್ಯರ ಬದುಕು ಯಜ್ಞದ ಹವಿಸ್ಸು.

---------------------
  ಕೆ.ಎಸ್.ಈಶ್ವರಪ್ಪರಿಗೆ ಈ ಬಾರಿ ಬಿಜೆಪಿಯಿಂದ ಶಿವಮೊಗ್ಗದಲ್ಲಿ ಟಿಕೆಟ್ ಸಿಗುವುದೇ ಅನುಮಾನ
- ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
  ಕಾಂಗ್ರೆಸ್‌ನಿಂದ ಕೊಡುವ ಉದ್ದೇಶವೇನಾದರೂ ಇದೆಯೆ?
---------------------
  ನೋಟು ರದ್ದತಿಯ ಬಗ್ಗೆ ಲೋಕಸಭೆಯಲ್ಲಿ ನಾನೇದರೂ ಮಾತನಾಡಿದರೆ ದೊಡ್ಡ ಭೂಕಂಪವಾದೀತು
-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
  ಕನಿಷ್ಠ ಮೋದಿಯ ಎದೆ ಕಂಪಿಸಿದರೂ ಅಷ್ಟು ಸಾಕು.

---------------------
  ದೇಶದ ಜನತೆಯ ನೆಮ್ಮದಿಗಾಗಿ ಮತ್ತೊಮ್ಮೆ ಜಾತ್ಯತೀತ ಪಕ್ಷಗಳು ಒಗ್ಗೂಡಬೇಕು
-ದೇವೇಗೌಡ, ಮಾಜಿ ಪ್ರಧಾನಿ
  ಜೊತೆಗೆ ಕುಟುಂಬದ ನೆಮ್ಮದಿಗಾಗಿಯೂ.

---------------------
  ವಿಸಿಟಿಂಗ್ ಕಾರ್ಡ್‌ಗಾಗಿ ಹುದ್ದೆ ಬಯಸುವವರಿಗೆ ಜೆಡಿಎಸ್‌ನಲ್ಲಿ ಅವಕಾಶವಿಲ್ಲ
- ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
  ಅಂದರೆ ವಿಸಿಟಿಂಗ್ ಕಾರ್ಡ್ ಕೂಡ ಸ್ವಂತ ಖರ್ಚಿನಿಂದಲೇ ಮಾಡಿಕೊಳ್ಳಬೇಕೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...