ಲಾರಿ ಹರಿದು ಮಕ್ಕಳ ಸಾವು
Update: 2016-12-13 20:27 IST
ರಾಯಚೂರು, ಡಿ.13 : ರಸ್ತೆ ದಾಟುವ ವೇಳೆ ಲಾರಿ ಢಿಕ್ಕಿ ಹೊಡೆದು, ಇಬ್ಬರು ಮಕ್ಕಳು ಸಾವುನ್ನಪ್ಪಿರುವ ಘಟನೆ ಇಂದಿಲ್ಲಿ ನಡೆದಿದೆ.
ಪ್ರಾಣೇಷ (12) ಮತ್ತು ಬೆನ್ಸನ್ (12) ಸಾವನ್ನಪ್ಪಿದ ದುದೈ೯ವಿಗಳು.
ರಾಯಚೂರು ತಾಲ್ಲೂಕಿನ ಸುಲ್ತಾನ್ ಪುರದಲ್ಲಿ ಮಕ್ಕಳು ರಸ್ತೆ ದಾಟುತ್ತಿದ್ದ ವೇಳೆ ಲಾರಿಯು ಮಕ್ಕಳ ಮೇಲೆ ಹರಿದಿದ್ದು, ಮಕ್ಕಳು ಸ್ಠಳದಲ್ಲೆ ಮೃತಪಟ್ಟಿದ್ದಾರೆ.
ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಬಗ್ಗೆ ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.