ಬೈಕ್ ಗಳ ಮುಖಾಮುಖಿ : ಮೂವರ ದಾರುಣ ಸಾವು
Update: 2016-12-13 20:42 IST
ಧಾರವಾಡ, ಡಿ.13 : ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿ ಹೊಡೆದು , ಮೂರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದಿಲ್ಲಿ ನಡೆದಿದೆ .
ರಮೇಶ ಗೌಡ ಮುಸಿನಗೌಡರ (40), ಈಶ್ವರಗೌಡ ಮುಸಿಗೌಡರ (6), ಸಿದ್ದಲಿಂಗ (28) ಮೃತಪಟ್ಟ ದುರ್ದೈವಿಗಳು.
ಹಾರೊಬೆಳವಡಿ ಗ್ರಾಮದ ಹಿರವಲಯದಲ್ಲಿ ಘಟನೆ ನಡೆದಿದೆ.
ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,