×
Ad

ಹುಲ್ಲಿನ ಬಣವೆಗೆ ಬೆಂಕಿ: ಅಪಾರ ಹಾನಿ

Update: 2016-12-13 22:54 IST

ಮುಂಡಗೋಡ, ಡಿ.13: ಸುಮಾರು ಐವತ್ತು ಸಾವಿರ ವೌಲ್ಯದ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾದ ಘಟನೆ ಪಟ್ಟಣದ ಹೊರ ವಲಯ ಮಾರಿಕಾಂಬಾನಗರ ಬಡಾವಣೆ ಅಂಚಿನ ಗದ್ದೆಯಲ್ಲಿ ಸಂಭವಿಸಿದೆ.
ಸುಮಾರು 4 ಎಕರೆ ಭೂಮಿಯಲ್ಲಿ ಬೆಳೆದ 50 ಸಾವಿರ ಮೌಲ್ಯದ ಭತ್ತದ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ. ಇಮಾಮ್ ಸಾಬ್ ನಿಶಾನದಾರ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
 ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಪ್ರಯತ್ನಪಟ್ಟರೂ, ಅಷ್ಟರಲ್ಲಿ ಬಹುತೇಕ ಹುಲ್ಲು ಬೆಂಕಿಗಾಹುತಿಯಾಗಿತ್ತು. ಧೂಮಪಾನ ಮಾಡಿ ಎಸೆದ ಕಿಡಿಯಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News