ಸಾಗರ: ವೈಭವದ ಮೀಲಾದುನ್ನಬಿ ಆಚರಣೆ
Update: 2016-12-13 22:56 IST
ಸಾಗರ, ಡಿ.13: ಇಲ್ಲಿನ ವಿವಿಧ ಮುಸ್ಲಿಮ್ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ಪ್ರವಾದಿ ಮುಹಮ್ಮ್ಮದ್ ಪೈಗಂಬರ್ ಅವರ 1491ನೆ ಜನ್ಮದಿನದ ಅಂಗವಾಗಿ ಮೀಲಾದುನ್ನಬಿಯನ್ನು ವೈಭವದಿಂದ ಆಚರಿಸಲಾಯಿತು. ಮೀಲಾದುನ್ನಬಿ ಅಂಗವಾಗಿ ಆಝಾದ್ ಮಸೀದಿ ಎದುರು ನಗರಸಭೆ ಸದಸ್ಯ ಸೈಯದ್ ಇಕ್ಬಾಲ್‌ಸಾಬ್ ಧ್ವಜಾರೋಹಣದ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧರ್ಮಗುರುಗಳು, ವಿವಿಧ ಮುಸ್ಲಿಮ್ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು. ನಂತರ ಮೆರವಣಿಗೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಮೆರವಣಿಗೆಯಲ್ಲಿ ಮುಸ್ಲಿಮ್ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.