×
Ad

ಬಸ್ ಅಪಘಾತ: ಐವರಿಗೆ ಗಾಯ

Update: 2016-12-13 22:58 IST

ಉಪ್ಪಿನಂಗಡಿ, ಡಿ.13: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿಮಗುಚಿ ಬಿದ್ದ ಘಟನೆ ನೆಲ್ಯಾಡಿ ಬಳಿಯ ಕೋಲ್ಪೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಘಟನೆಯಿಂದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಹಾಸನ ಮೂಲದ ಅನು(39), ಮಂಗಳೂರಿನ ಜಯಂತಿ(45), ಆಂಧ್ರಪ್ರದೇಶದ ಭೂಪಾಲ್ ರೆಡ್ಡಿ(24) ಸೇರಿದಂತೆ ಒಟ್ಟು ಐವರು ಗಂಭೀರವಾಗಿ ಗಾಯ ಗೊಂಡಿದ್ದಾರೆ. ಈ ಮೂವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನುಳಿದ ಇಬ್ಬರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News