ಬಸ್-ಬೈಕ್ ಢಿಕ್ಕಿ: ಸವಾರ ಗಂಭೀರ
Update: 2016-12-13 22:58 IST
ಸುಳ್ಯ, ಡಿ.13: ಕೆಎಸ್ಸಾರ್ಟಿಸಿ ಬಸ್ ಮತ್ತು ಬುಲೆಟ್ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಸುಳ್ಯದಲ್ಲಿ ನಡೆದ ಮೀಲಾದುನ್ನಬಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಗಾಳಿಮುಖದ ಅಡ್ಕ ನಿವಾಸಿ ಸುಹೈಬ್ ರ್ಯಾಲಿ ಮುಗಿಸಿ ಬೈಕ್‌ನಲ್ಲಿ ತನ್ನ ಮಿತ್ರನೊಂದಿಗೆ ವಾಪಸ್ ತೆರಳುತ್ತಿದ್ದಾಗ ಮೊಗರ್ಪಣೆ ಬಳಿ ಪುತ್ತೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಬೈಕ್ ಮುಖಾಮುಖಿ ಢಿಕ್ಕಿ ಹೊಡೆಯಿತು.
ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.