×
Ad

ದೊಡ್ಡ ಅಭಿಮಾನಿಯನ್ನು ಭೇಟಿಯಾದ ಮೆಸ್ಸಿ..!

Update: 2016-12-13 23:54 IST

ಪ್ಲಾಸ್ಟಿಕ್ ಬ್ಯಾಗ್‌ನಿಂದ ನಿರ್ಮಿಸಲ್ಪಟ್ಟ ಲಿಯೊನೆಲ್ ಮೆಸ್ಸಿಯ 10 ನಂಬರ್‌ನ ಜರ್ಸಿಯನ್ನು ಧರಿಸಿ ಆನ್‌ಲೈನ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದ ಅಫ್ಘಾನಿಸ್ತಾನದ ಬಾಲಕ ಮುರ್ತಝಾ ಅಹ್ಮದಿಯ ಕನಸು ನನಸಾಗಿದೆ. ಪೆನ್ನಿನಿಂದ ಮೆಸ್ಸಿ ಎಂದು ಬರೆದಿದ್ದ ಪ್ಲಾಸ್ಟಿಕ್ ಜರ್ಸಿಯನ್ನು ಧರಿಸಿ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪ್ರಸಿದ್ಧಿಗೆ ಬಂದಿದ್ದ ಆರರ ಹರೆಯದ ಬಾಲಕ ಅಹ್ಮದಿ ಅರ್ಜೆಂಟೀನದ ಮೆಸ್ಸಿ ಸಹಿತ ವಿಶ್ವದ ಗಮನ ತನ್ನತ್ತ ಸೆಳೆದಿದ್ದರು. ಮೆಸ್ಸಿ ಅಭಿಮಾನದ ದ್ಯೋತಕವಾಗಿ ತನ್ನ ಹಸ್ತಾಕ್ಷರವಿರುವ ಜರ್ಸಿಯನ್ನು ಅಹ್ಮದಿಗೆ ಕಳುಹಿಸಿಕೊಟ್ಟಿದ್ದರು. ಇದೀಗ ಈ ಇಬ್ಬರು ದೋಹಾದಲ್ಲಿ ಮುಖಾಮುಖಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor