ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾ ಕೂಟಕ್ಕೆ ಆಯ್ಕೆ
Update: 2016-12-14 18:52 IST
ಸಕಲೇಶಪುರ,ಡಿ.14: ತಾಲೂಕಿನ ಕೌಡಳ್ಳಿ ಗ್ರಾಮದ ಕಿರಿಯ ಪ್ರಾಧಮಿಕ ಶಾಲೆಯ ಶಿಕ್ಷಕ ಎಸ್.ಎಂ.ರುದ್ರಪ್ಪ(59) ಅವರು ಡಿಸೆಂಬರ್ 10 ಮತ್ತು 11ರಂದು ಬೆಂಗಳೂರಿನ ವಿದ್ಯಾ ನಗರ ಕ್ರೀಡಾಂಗಣದಲ್ಲಿ ನಡೆದ 2016-17ರ ಹಿರಿಯರ ಕ್ರೀಡಾ ಕೂಟ್ಟದಲ್ಲಿ 55 ವರ್ಷ ಮೇಲ್ಪಟ್ಟ ವಯಸ್ಸಿನ ಗುಂಪಿನ ಟ್ರಿಪ್ಪಲ್ ಜಂಪ್ ವಿಭಾಗದಲ್ಲಿ ಪ್ರಥಮ ಬಹುಮಾನ ಮತ್ತ ಚಿನ್ನದ ಪದಕ ಗೆಲ್ಲುವ ಮೂಲಕ 2017 ಫೆಬ್ರವರಿ ತಿಂಗಳಲ್ಲಿ ಹೈದರಾಬಾದಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.