×
Ad

ಭೀಮಾನಾಯ್ಕ ಮನೆ ಮೇಲೆ ಎಸಿಬಿ ದಾಳಿ, ಕೋಟ್ಯಂತರ ಆಸ್ತಿ ವಶ

Update: 2016-12-16 18:55 IST

ಬೆಂಗಳೂರು, ಡಿ.16: ಮಾಜಿ ಸಚಿವ ಜನಾರ್ಧನರೆಡ್ಡಿ ಪುತ್ರಿಯ ಅದ್ದೂರಿ ವಿವಾಹಕ್ಕೆ ಕಪ್ಪು ಹಣವನ್ನು ಬಿಳಿ ಮಾಡಿಸಿಕೊಟ್ಟಿರುವ ಆರೋಪ ಹಾಗೂ ಕಾರು ಚಾಲಕ ರಮೇಶ್‌ಗೌಡ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧನದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ವೌಲ್ಯದ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
 ಶುಕ್ರವಾರ ನಗರದ ಯಲಹಂಕ ಉಪನಗರದಲ್ಲಿರುವ ಕರ್ನಾಟಕ ಗೃಹ ಮಂಡಳಿ ವಿಶೇಷ ಭೂಸ್ವಾಧೀನಾಧಿಕಾರಿ ಎಲ್.ಭೀಮಾನಾಯ್ಕಾ ನಿವಾಸದ ಮೇಲೆ ದಾಳಿ ನಡೆಸಿ, ಆಸ್ತಿ ದಾಖಲೆಗಳನ್ನು ಪರಿಶೀಲನೆ ಮಾಡಲಾಯಿತು. ಅದೇ ರೀತಿ, ಬೆಳಗಾವಿ ಜಿಲ್ಲೆಯ ಸದಾಶಿವನಗರದಲ್ಲಿರುವ ಹೊಂದಿರುವ ಮತ್ತೊಂದು ನಿವಾಸದ ಮೇಲೂ ದಾಳಿ ನಡೆಸಲಾಯಿತು. ಬಳಿಕ ಹೊಸಪೇಟೆಯ ಮರೇನಹಳ್ಳಿ ತಾಂಡದಲ್ಲಿರುವ ಭೀಮಾನಾಯ್ಕಿ ಇಬ್ಬರು ಸಹೋದರರ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ಮಾಡಲಾಯಿತು.
ಆಸ್ತಿ ವಿವರ-ವೌಲ್ಯ: ಸದಾಶಿವನಗರದಲ್ಲಿ 2050 ಚದರಡಿಯ ನಿವೇಶನದಲ್ಲಿ ನಿರ್ಮಿಸಲಾಗಿರುವ 3 ಮಹಡಿಗಳ ಕಟ್ಟಡವನ್ನು ಭೀಮಾನಾಯ್ಕಿ 2008ನೆ ಸಾಲಿನಲ್ಲಿ ಖರೀದಿಸಿದ್ದರು. ಇದರ ವೌಲ್ಯ 40 ಲಕ್ಷ ರೂ. ಎಂದು ಎಸಿಬಿ ತಿಳಿಸಿದೆ. ಅದೇ ರೀತಿ, ಬಳ್ಳಾರಿ ಜಿಲ್ಲೆಯ ಹಗರಬೊಮ್ಮನಹಳ್ಳಿಯ ಮಾದರೂ ಗ್ರಾಮದ ಸರ್ವೆ ನಂ.134ರಲ್ಲಿ ಬರೋಬ್ಬರಿ 10 ಎಕರೆ ಕೃಷಿ ಭೂಮಿಯನ್ನು 2012ರ ಸಾಲಿನಲ್ಲಿ ಸಂಬಂಧಿಕರ ಹೆಸರು ಉಲ್ಲೇಖಿಸಿ 3.44 ಲಕ್ಷ ರೂ.ಗೆ ಖರೀದಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News