×
Ad

ಇಲಲ್ ಹಬೀಬ್ ಹುಬ್ಬುರ್ರಸೂಲ್ ಕಾನ್ಫರೆನ್ಸ್‌ಗೆ ಚಾಲನೆ

Update: 2016-12-16 23:16 IST

 ಸಾಗರ,ಡಿ.16: ಮೀಲಾದುನ್ನಬಿ ಆಚರಣೆಯ ಅಂಗವಾಗಿ ಬದ್ರಿಯಾ ಆಡಳಿತ ಕಮಿಟಿ ಹಾಗೂ ಎಸ್ಸೆಸ್ಸೆಫ್ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಇಲಲ್ ಹಬೀಬ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮಕ್ಕೆ ಸೈಯದ್ ಬಾಷಾ ತಂಙಲ್ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬದ್ರಿಯಾ ಮಸೀದಿಯ ಖತೀಬ್ ಅಬ್ದುಲ್ ರಹ್ಮಾನ್ ಸಖಾಫಿ,ಬದ್ರಿಯಾ ಆಡಳಿತ ಕಮಿಟಿಯ ಸದಸ್ಯರಾದ ಕೆ.ಪಿ ಶರೀಫ್, ಇಸ್ಮಾಯೀಲ್, ಎಸ್ಸೆಸ್ಸೆಫ್‌ನ ಪದಾಧಿಕಾರಿಗಳಾದ ಅಝರುದ್ದೀನ್,ವಾಹಿದ್,ಶಂಸುದ್ದೀನ್‌ಕಾರ್ಗಲ್,ಉಮರ್ ಫಾರೂಖ್,ಸಮೀರ್,ಮೋಣು ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News