×
Ad

ತೀರ್ಥಹಳ್ಳಿ: ರೈತ ಮಹಿಳೆಗೆ ಸೇರಿದ ಅಡಿಕೆ ಸಸಿ ಧ್ವಂಸ

Update: 2016-12-16 23:19 IST

ತೀರ್ಥಹಳ್ಳಿ, ಡಿ.16: ಬಗರ್ ಹುಕುಂ ಸಾಗುವಳಿ ಪ್ರದೇಶದಲ್ಲಿ ನೆಟ್ಟ ಅಡಿಕೆ ಸಸಿಗಳನ್ನು ಕಡಿದು ನಾಶಪಡಿಸಿದ ಪ್ರಕರಣ ತಾಲೂಕಿನ ಅಲಗೇರಿ ಗ್ರಾಮದಲ್ಲಿ ನಡೆದ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿದ ಆ ಭಾಗದ ಗ್ರಾಮಸ್ಥರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಟ್ಟಣದ ತಾಲೂಕು ಕಚೆೇರಿ ಮುಂಭಾಗದಲ್ಲಿ ಕಡಿದ ಅಡಿಕೆ ಸಸಿ ರಾಶಿ ಹಾಕಿ ನ್ಯಾಯ ದೊರಕಿಸುವಂತೆ ಪ್ರತಿಭಟಿಸಿದರು.


ಅಲಗೇರಿ ಗ್ರಾಮದ ಸ.ನಂ. 37ರಲ್ಲಿ ಅನೇಕ ವರ್ಷ ಗಳಿಂದ ರೈತ ಮಹಿಳೆ ಶಾಂತಮ್ಮ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದರು. ಅಡಿಕೆ, ಬಾಳೆ ಸಸಿಗಳನ್ನು ನೆಟ್ಟು ಜೀವನ ನಡೆಸುತ್ತಿದ್ದರು. ಆದರೆ, ಕೆಲವು ದುಷ್ಕರ್ಮಿಗಳು ಅಡಿಕೆ ಸಸಿಗಳನ್ನು ನಾಶಪಡಿಸಿದ್ದಾರೆ. ಈ ಸಂಬಂಧ ಶಾಂತಮ್ಮ ಅವರು ಆಗುಂಬೆ ಪೊಲೀಸ್ ಠಾಣೆಗೂ ದೂರು ದಾಖಲಿಸಿದ್ದರು ಎನ್ನಲಾಗಿದೆ.


ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಮೀಸಲಿಟ್ಟಿರುವ ಸಲುವಾಗಿ ಒಂದು ಕೋಮಿನ ಜನರ ಅರ್ಜಿಗೆ ಜಿಲ್ಲಾಧಿಕಾರಿ 1 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಸ.ನಂ. ವ್ಯಾಪ್ತಿಯ ಇತರ ಕಡೆ ಸ್ಥಳಾವಕಾಶ ಇದ್ದರೂ ಶಾಂತಮ್ಮ ಅವರಿಗೆ ಸೇರಿದ ಬಗರ್ ಹುಕುಂ ಸಾಗುವಳಿ ಪ್ರದೇಶದಲ್ಲಿ ಸ್ಮಶಾನ ಜಾಗ ಗುರುತಿಸಬೇಕೆಂದು ಲಾಬಿ ನಡೆಸಲಾಗುತ್ತಿದೆ. ಮೂರು ದಿನಗಳ ಹಿಂದೆ ಗ್ರಾಮ ಲೆಕ್ಕಿಗ ಹಾಗೂ ಸರ್ವೇ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರ ವಿರೋಧ ಕಂಡು ವಾಪಸ್ಸಾಗಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೂಕು ಕಚೇರಿಯಲ್ಲಿ ಭೂ ನ್ಯಾಯ ಮಂಡಳಿ ನ್ಯಾಯಾಲಯ ಕಲಾಪದಲ್ಲಿ ಉಪಸ್ಥಿತರಿದ್ದ ಉಪ ವಿಭಾಗಾಧಿಕಾರಿ ಹೊರಬಂದು ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News