×
Ad

​ಕೆಎಸ್ಸಾರ್ಟಿಸಿ ವೇಗದೂತ ಸಾರಿಗೆ ಬಸ್‌ಪಾಸ್‌ಗಳ ಪರಿಷ್ಕೃತ ದರ ಪ್ರಕಟ

Update: 2016-12-17 22:54 IST

ಚಿಕ್ಕಮಗಳೂರು, ಡಿ.17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿತರಿಸುತ್ತಿರುವ ವೇಗದೂತ ಸಾರಿಗೆ ಮಾಸಿಕ ಬಸ್‌ಪಾಸ್‌ಗಳ ದರಗಳನ್ನು ಡಿ.10 ರಿಂದ ಪರಿಷ್ಕರಣೆ ಮಾಡಿದ್ದು, ವೇಗದೂತ ಸಾರಿಗೆ ಮಾಸಿಕ ಬಸ್ ಪಾಸುಗಳ ದರಗಳನ್ನು 4 ಹಂತಗಳಿಂದ 20 ಹಂತಗಳವರೆಗೆ ಕಡಿಮೆಗೊಳಿಸಲಾಗಿದೆ. ಈ ಬಸ್‌ಪಾಸ್‌ಗಳನ್ನು ಹೊಂದಿರುವ ಪಾಸುದಾರರು ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳೆರಡರಲ್ಲೂ ಪ್ರಯಾಣಿಸಬಹುದಾಗಿದೆ.


ನಿಗಮದ ಸಾಮಾನ್ಯ ಸೇವೆಗಳ ಮಾಸಿಕ ಬಸ್‌ಪಾಸ್‌ಗಳನ್ನು 10 ದರ ವಿಧಿಸುವ ಹಂತಗಳವರೆಗೆ ವಿತರಿಸಲಾಗುವುದು. ಪ್ರಸ್ತುತ ವಿತರಣೆಯಲ್ಲಿರುವ ಸಾಮಾನ್ಯ ಪಾಸುಗಳ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾಮಾನ್ಯ ಸೇವೆಗಳ ಮಾಸಿಕ ಬಸ್‌ಪಾಸುಗಳನ್ನು ಪಡೆದಿರುವ ಪ್ರಯಾಣಿಕರು ಸಾಮಾನ್ಯ ಸೇವೆಗಳಲ್ಲಿ ಮಾತ್ರ ಪ್ರಯಾಣಿಸಬಹುದಾಗಿದೆ. ಈ ಪಾಸುಗಳು ವಿತರಣೆಯ ದಿನಾಂಕದಿಂದ 30 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ.

ಪರಿಷ್ಕೃತ ವೇಗದೂತ ಸೇವೆಗಳ ಮಾಸಿಕ ಬಸ್‌ಪಾಸ್‌ಗಳ ದರಗಳು ಈ ಕೆಳಗಿನಂತಿರುತ್ತವೆ. ಮೊದಲನೆ ಹಂತದ ಪರಿಷ್ಕೃತ ದರ 400 ರೂ., 2ನೆ ಹಂತದ ಪರಿಷ್ಕೃತ ದರ 600 ರೂ., 3ನೆ ಹಂತದ ಪರಿಷ್ಕೃತ ದರ 1,000 ರೂ., 4ನೆ ಹಂತದ ಪರಿಷ್ಕೃತ ದರ 1,100 ರೂ., 5ನೆ ಹಂತದ ಪರಿಷ್ಕೃತ ದರ 1,200 ರೂ., 6ನೆ ಹಂತದ ಪರಿಷ್ಕೃತ ದರ 1,400ರೂ., 7ನೆ ಹಂತದ ಪರಿಷ್ಕೃತ ದರ 1,550 ರೂ., 8ನೆ ಹಂತದ ಪರಿಷ್ಕೃತ ದರ 1,700 ರೂ., 9ನೆ ಹಂತದ ಪರಿಷ್ಕೃತ ದರ 1,850 ರೂ., 10ನೆ ಹಂತದ ಪರಿಷ್ಕೃತ ದರ 2,000 ರೂ., 11ನೆ ಹಂತದ ಪರಿಷ್ಕೃತ ದರ 2,150ರೂ., 12ನೆ ಹಂತದ ಪರಿಷ್ಕೃತ ದರ 2,250 ರೂ., 13 ನೆ ಹಂತದ ಪರಿಷ್ಕೃತ ದರ 2,300 ರೂ., 14ನೆ ಹಂತದ ಪರಿಷ್ಕೃತ ದರ 2,350 ರೂ., 15ನೆ ಹಂತದ ಪರಿಷ್ಕೃತ ದರ 2,450 ರೂ., 16ನೆ ಹಂತದ ಪರಿಷ್ಕೃತ ದರ 2,550 ರೂ., 17ನೆ ಹಂತದ ಪರಿಷ್ಕೃತ ದರ 2,600 ರೂ., 18 ನೆ ಹಂತದ ಪರಿಷ್ಕೃತ ದರ 2,650 ರೂ., 19ನೆ ಹಂತದ ಪರಿಷ್ಕೃತ ದ    ರ 2,700 ರೂ., 20 ನೆ ಹಂತದ ಪರಿಷ್ಕೃತ ದರ 2,750 ಆಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News