×
Ad

ನಾಳೆ ಬುಡಕಟ್ಟು ಸಮುದಾಯಗಳಿಗೆ ಕಾರ್ಯಾಗಾರ

Update: 2016-12-17 23:01 IST

ದಾವಣಗೆರೆ, ಡಿ.17: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ುರಿತು ಬುಡಕಟ್ಟು ಸಮುದಾಯ ದವರಿಗೆ ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಿಗೆ ಅರಿವು ಮೂಡಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಡಿ. 19ರಂದು ಬೆಳಗ್ಗೆ 10:30ಕ್ಕೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.


ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ರಾಜ್ಯದಲ್ಲಿನ ಪರಿಶಿಷ್ಟ ಪಂಗಡದ 50 ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಿಡುಗಡೆ ಮಾಡುವ ಅನುದಾನದಲ್ಲಿ ಸಂಶೋಧನೆ, ಕುಲಶಾಸ್ತ್ರೀಯ ಅಧ್ಯಯನ, ಬುಡಕಟ್ಟು ಸಮುದಾಯದ ಭಾಷಾಧ್ಯಯನ, ವೌಲ್ಯಮಾಪನ, ತರಬೇತಿ ಕಾರ್ಯಕ್ರಮ, ವಿಚಾರ ಸಂಕಿರಣ ಕಾರ್ಯಾಗಾರ, ಬುಡಕಟ್ಟು ಸಮುದಾಯದವರ ಸಾಕ್ಷ್ಯಚಿತ್ರಗಳ ನಿರ್ಾಣ, ಬುಡಕಟ್ಟು ಸಮುದಾಯದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಬುಡಕಟ್ಟು ಪರಿಕರಗಳ ಸಂಗ್ರಹಾಲಯ, ಬುಡಕಟ್ಟು ಉತ್ಸವಗಳ ಆಯೋಜನೆ, ಗ್ರಂಥಾಲಯ ಸ್ಥಾಪನೆ ಹಾಗೂ ಪ್ರಕಟಣೆಯಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕಾರ್ಯಾಗಾರದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು.

ಆದ್ದರಿಂದ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯದವರು ಮತ್ತು ಉದ್ಯೋಗ ಖಾತ್ರಿ ಅನುಷ್ಠಾನಾಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News