ವಾಮಾಚಾರಕ್ಕಾಗಿ ಬಾಲಕನ ಕೊಲೆಗೆ ವಿಫಲ ಯತ್ನ
ಬೆಳಗಾವಿ, ಡಿ. 18: ದುಷ್ಕರ್ಮಿಗಳು ಬಾಲಕನನ್ನು ಅಪಹರಿಸಿ ವಾಮಾಚಾರದ ನೆಪದಲ್ಲಿ ಮನಸೋ ಇಚ್ಛೆ ಥಳಿಸಿ, ಆತನ ಹತ್ಯೆಗೆ ವಿಲಯತ್ನ ನಡೆಸಿರುವ ಅಮಾನವೀಯ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರರು ಗ್ರಾಮದಲ್ಲಿ ನಡೆದಿದೆ.
ತೀವ್ರ ಸ್ವರೂಪದ ಹಲ್ಲೆಯಿಂದ ಗಂಭೀರವಾಗಿ ಗಾಯ ಗೊಂಡು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸು ತ್ತಿರುವ ಬಾಲಕನನ್ನು ರಾಜಕುಮಾರ್ ಮಾರುತಿ ತುಪ್ಪ ಸನ್ನದ (09) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಆಟವಾಡುತ್ತಿದ್ದ ಬಾಲಕನನ್ನು ಅಪಹರಣ ಮಾಡಿದ್ದಾರೆ. ಆ ಬಳಿಕ ಗ್ರಾಮದ ಹೊರ ವಲಯದಲ್ಲಿ ಕಲ್ಲಿನಿಂದ ಜಜ್ಜಿ, ಕಬ್ಬಿಣದ ಸಲಾಕೆಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ಆ ಬಳಿಕ ಬಂಡೆ ಮಧ್ಯೆದಲ್ಲಿ ಕೂರಿಸಿದ್ದು, ದೇಹದ ಮೇಲೆ ಕಲ್ಲುಗಳನ್ನು ಹೇರಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಾಲಕನ ನರಳಾಟವನ್ನು ಗಮನಿಸಿದ ದಾರಿಹೋಕರು ಕೂಡಲೇ ಆತನನ್ನು ರಕ್ಷಿಸಿ ಮೀರಜ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಾಲಕನ ಎದೆ, ಕೈ- ಕಾಲು ಮತ್ತು ಕಿವಿ ಸೇರಿದಂತೆ ಆತನ ದೇಹದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಗೊತ್ತಾಗಿದೆ.
ದುಷ್ಕರ್ಮಿಗಳು ವಾಮಾಚಾರಕ್ಕಾಗಿ ಯತ್ನಿಸಿರುವ ಸಂಶಯ ವ್ಯಕ್ತವಾಗಿದೆ. ಬಾಲಕ ಅಸ್ವಸ್ಥಗೊಂಡಿರುವ ಹಿನ್ನೆಲೆ ಯಲ್ಲಿ ಆತನ ಪೋಷಕರು ರೋಧನ ಮುಗಿಲು ಮುಟ್ಟಿದ್ದು, ಕೊಕಟನೂರರು ಗ್ರಾಮದ ಜನತೆ ಆತಂಕದಲ್ಲಿದ್ದಾರೆ.
ಅಸ್ವಸ್ಥನಾಗಿದ್ದ ಬಾಲಕನಿಗೆ ಇದೀಗ ಪ್ರಜ್ಞೆ ಮರುಕಳಿಸಿದ್ದು, ಇಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾನೆ.
ಈ ಸಂಬಂಧ ಅಥಣಿಯ ಐಗಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಕೈಗೊಂಡಿದ್ದು, ತಪ್ಪಿತಸ್ಥರ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.