ಅಳಿಯನಿಂದ ಅತ್ತೆ, ಮಾವನ ಮೇಲೆ ಹಲ್ಲೆ
ಮುಂಡಗೋಡ, ಡಿ.18: ಮಗಳಿಗೆ ತೊಂದರೆ ಕೊಡುತ್ತಿದ್ದ ಅಳಿಯನಿಗೆ ಬುದ್ಧಿ ಹೇಳಿದ್ದಕ್ಕೆ, ಅಳಿಯ ಅತ್ತೆ ಮಾವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಗಾ ಕಾಲನಿಯಲ್ಲಿ ನಡೆದಿದೆ
ಹಲ್ಲೆ ಮಾಡಿದ ಅಳಿಯನನ್ನು ಸುರೇಶ ದಾದಾರಾವ್ ಶಿಂಧೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದವರನ್ನು ಮೈನಳ್ಳಿಯ ದುರ್ಗಾ ಕಾಲನಿಯ ಬೈರು ಸಾಳೊಂಕೆ ಮತ್ತು ತುಳಸಾಬಾಯಿ ಸಾಳೊಂಕೆ ಎಂದು ಹೇಳಲಾಗಿದೆ
ಹಲ್ಲೆಗೊಳಗಾದ ದಂಪತಿಗಳು ತಮ್ಮ ಮಗಳನ್ನು ಸರಿಯಾಗಿ ನೋಡಿಕೊಂಡು ಹೋಗು ತೊಂದರೆ ಕೊಡಬೇಡ ಎಂದು ಬುದ್ಧಿವಾದ ಹೇಳಿದ್ದರು.
ಇದರಿಂದ ಅಳಿಯನು ಕುಪಿತನಾಗಿ ಸುತ್ತಿಗೆ ಹಿಡಿದು ಕೊಂಡು ಅಕ್ರಮವಾಗಿ ಮನೆಗೆ ಪ್ರವೇಶ ಮಾಡಿ ಅತ್ತೆ ಮಾವನನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ನನ್ನ ಹೆಂಡತಿಗೆ ಹಾಗೂ ನನಗೆ ಬುದ್ಧಿ ಹೇಳುವುದಕ್ಕೆ ನೀವು ಯಾರು, ನೀವು ಬದುಕಿದ್ದರೆ ತಾನೆ ಮಾತನಾಡುವುದು ಎನ್ನುತ್ತಾ ಮಾವನಿಗೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ.
ಬಿಡಿಸಲು ಬಂದ ಅತ್ತೆಯನ್ನು ಸಲಿಕೆಯ ಕಾವಿನಿಂದ ತಲೆಗೆ ಹೊಡೆದಿದ್ದಾನೆ ಎಂದು ಬೈರು ಸಾಳೊಂಕೆ ನೀಡಿದ ಪೊಲೀಸ್ ದೂರಿನಲ್ಲಿ ತಿಳಿದು ಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.