​ಪತಿಯ ಕೃತ್ಯಕ್ಕೆ ಹೆಂಡತಿಯನ್ನು ಬಂಧಿಸಿದ ಅಬಕಾರಿ ಅಧಿಕಾರಿಗಳು

Update: 2016-12-18 18:02 GMT


ಅಧಿಕಾರಿಗಳ ವರ್ತನೆ ಖಂಡಿಸಿ ಪ್ರತಿಭಟನೆ
ಶಿಕಾರಿಪುರ, ಡಿ.18: ಕಳ್ಳಭಟ್ಟಿ ತಯಾರಿಕೆಯ ಸುಳ್ಳು ಆರೋಪದ ನೆಪದಲ್ಲಿ ಅಮಾಯಕ ಮಹಿಳೆಯನ್ನು ಮಗುವಿನ ಜೊತೆಯಲ್ಲಿ ಕರೆತಂದು ಅಬಕಾರಿ ಕಚೇರಿಯಲ್ಲಿ ಕೂರಿಸಿಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಣಜಾರ್ ಸಮಾಜದ ನೂರಾರು ಸದಸ್ಯರು ಅಬಕಾರಿ ಕಚೇರಿ ಮುಂಭಾಗದಲ್ಲಿ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಪ್ರತಿಭಟಿಸಿದ ಘಟನೆ ಶನಿವಾರ ನಡೆಯಿತು.


  ತಾಲೂಕಿನ ಮಳವಳ್ಳಿ ತಾಂಡಾದ ರೈತ ಮಹಿಳೆ ಶೋಭಾಬಾಯಿ ಮತ್ತು ಆಕೆಯ ವರ್ಷದ ಮಗುವನ್ನು ಮನೆಯಲ್ಲಿ ಕಳ್ಳಭಟ್ಟಿ ತಯಾರಿಸಿ ಕೊಡದಲ್ಲಿ ಸಂಗ್ರಹಿಸಿರುವ ಆರೋಪದಡಿ ವಶಕ್ಕೆ ಪಡೆದು ಅಬಕಾರಿ ಕಚೇರಿಯಲ್ಲಿ ಕುಳ್ಳಿರಿಸಲಾಗಿದ್ದು, ಮಗುವಿನ ಆಕ್ರಂದನವನ್ನು ಆಲಿಸಿದ ಬಣಜಾರ್ ಸಮುದಾಯದ ನೂರಾರು ಸದಸ್ಯರು ಅಬಕಾರಿ ಕಚೇರಿಗೆ ಧಾವಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.


 ತಾಲೂಕು ಬಣಜಾರ್ ಸಮಾಜದ ಮುಖಂಡ ರಾಘವೇಂದ್ರನಾಯ್ಕ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಕಠಿಣ ಕ್ರಮಕ್ಕೆ ಹಲವು ಬಾರಿ ಮನವಿ ಮಾಡಲಾಗಿದ್ದು, ಖಚಿತ ಮಾಹಿತಿ ನೀಡಿ ಲಿಖಿತ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗದ ಅಧಿಕಾರಿಗಳು ಕುಟುಂಬದ ಸದಸ್ಯರ ತಪ್ಪಿಗೆ ಅಮಾಯಕ ಮಹಿಳೆ ಹಾಗೂ ಮುಗ್ಧ ಮಗುವನ್ನು ವಶಕ್ಕೆ ಪಡೆದಿರುವುದು ಅಮಾನವೀಯ ಕ್ರಮವಾಗಿದೆ ಎಂದು ದೂರಿದರು.


 ಅಬಕಾರಿ ಇನ್‌ಸ್ಪೆೆಕ್ಟರ್ ಗಿರೀಶ್ ಮಾತನಾಡಿ, ಇದೀಗ ವಶಕ್ಕೆ ಪಡೆಯಲಾದ ಮಹಿಳೆಯ ಪತಿ ಹೊಳೆಯನಾಯ್ಕ, ಮಾವ ಚಂದ್ರನಾಯ್ಕ ನಿರಂತರವಾಗಿ ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಈಗಾಗಲೇ ಇವರ ವಿರುದ್ಧ ಪೊಲೀಸ್ ಹಾಗೂ ಅಬಕಾರಿ ಇಲಾಖೆಯಲ್ಲಿ ಹಲವು ದೂರು ದಾಖಲಾಗಿದೆ ಎಂದು ತಿಳಿಸಿ ಅಕ್ರಮ ಕಳ್ಳಭಟ್ಟಿ ತಯಾರಿಕೆಯನ್ನು ಸ್ಥಗಿತಗೊಳಿಸುವಂತೆ ಹಲವು ಬಾರಿ ತಿಳುವಳಿಕೆ ಹಾಗೂ ಎಚ್ಚರಿಕೆಯನ್ನು ನೀಡಿದರೂ ಕಾನೂನಿಗೆ ವಿರುದ್ಧ್ದವಾದ ದಂಧೆಯಲ್ಲಿ ಸಕ್ರಿಯವಾಗಿದು,್ದ ಈ ದಿಸೆಯಲ್ಲಿ ಪತ್ನಿಯನ್ನು ವಶಕ್ಕೆ ಪಡೆಯಲಾಗಿದೆ. ಕೆಲ ಕಾನೂನು ಕ್ರಮದ ನಂತರ ವಾಪಸ್ ಕಳುಹಿಸುವುದಾಗಿ ತಿಳಿಸಿದರು.


  ನಂತರದಲ್ಲಿ ಪತಿಯ ಕೃತ್ಯಕ್ಕೆ ಅಮಾಯಕ ಪತ್ನಿ ಹಾಗೂ ಮಗುವನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಅಧಿಕಾರಿಗಳು ಹಾಗೂ ಬಣಜಾರ್ ಮುಖಂಡರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಮಹಿಳೆಯ ಬಿಡುಗಡೆ ನಂತರ ಮಾತ್ರ ಸ್ಥಳದಿಂದ ತೆರಳುವುದಾಗಿ ಪಟ್ಟು ಹಿಡಿದರು.ನಂತರದಲ್ಲಿ ಅಧಿಕಾರಿಗಳ ರಕ್ಷಣೆಯಲ್ಲಿ ವಾಪಸ್ ಸ್ವಗ್ರಾಮಕ್ಕೆ ಕಳುಹಿಸಲಾಯಿತು.


  ಈ ಸಂದರ್ಭದಲ್ಲಿ ತಾಲೂ ು ಬಣಜಾರ್ ಸಮಾಜದ ಅಧ್ಯಕ್ಷ ಸುರೇಶನಾಯ್ಕ,ಮುಖಂಡ ಜಯಾನಾಯ್ಕ,ಮಂಜಾ ನಾಯ್ಕ,ಗಜೇಂದ್ರನಾಯ್ಕ,ಗಿರೀಶನಾಯ್ಕ, ರಮೇಶನಾಯ್ಕ, ಹರೀಶನಾಯ್ಕ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News