ದಾಖಲೆಗಳಿಲ್ಲದ 24 ಲಕ್ಷ ರೂ. ವೌಲ್ಯದ ಅಡಿಕೆ ಚೀಲ ವಶಕ್ಕೆ
Update: 2016-12-21 23:44 IST
ಹೊನ್ನಾವರ, ಡಿ.21: ತಾಲೂಕಿನ ಹೊಸಾಕುಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ದಾಸ್ತಾನು ಮಳಿಗೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ದಾಖಲೆ ಇಲ್ಲದೆ ರೈತರ ಹೆಸರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 24 ಲಕ್ಷ ರೂ. ವೌಲ್ಯದ 225 ಅಡಿಕೆ ಚೀಲಗಳನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ
ವಶಪಡಿಸಿಕೊಂಡ ಅಡಿಕೆ ಚೀಲವು ಹೊಸಾಕುಳಿ ಗ್ರಾಪಂ ಅಧ್ಯಕ್ಷ ಸುರೇಶ ಶೆಟ್ಟಿ ಅವರಿಗೆ ಸೇರಿದ್ದು ಎನ್ನಲಾಗಿದೆ.
ಇವರು ಅಡಿಕೆ ವ್ಯಾಪಾರಿಯಾಗಿದ್ದು, ಸೂಕ್ತ ದಾಖಲೆ ಇಲ್ಲದೆ 24 ಲಕ್ಷ ರೂ. ವೌಲ್ಯದ 260 ಕ್ವಿಂಟಲ್‌ನ 225 ಅಡಿಕೆ ಚೀಲವನ್ನು ವ್ಯವಸಾಯ ಸೇವಾ ಸಹಕಾರಿ ಸಂಘದ ದಾಸ್ತಾನು ಮಳಿಗೆಯಲ್ಲಿ ರೈತರ ಹೆಸರಿನಲ್ಲಿ ದಾಸ್ತಾನು ಮಾಡಿದ್ದರು ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಮಟಾದ ವಾಣಿಜ್ಯ ತೆರಿಗೆ ಅಧಿಕಾರಿಗಳು ಅಡಿಕೆಯನ್ನು ವಶಪಡಿಸಿಕೊಂಡಿದ್ದು ಆರೋಪಿ ಸುರೇಶ ಶೆಟ್ಟಿಗೆ 2.40 ಲಕ್ಷ ರೂ. ದಂಡ ವಿಧಿಸಿದ್ದಾರೆ.