ಡಿಎಚ್ ಶಂಕರಮೂರ್ತಿಗೆ ರಾಜ್ಯಾಪಾಲ ಹುದ್ದೆ ?
ಬೆಂಗಳೂರು, ಡಿ.23: ಕರ್ನಾಟಕ ವಿಧಾನಪರಿಷತ್ ನ ಸಭಾಪತಿ ಡಿಎಚ್. ಶಂಕರಮೂರ್ತಿ ರಾಜ್ಯಪಾಲರಾಗಿ ನೇಮಕಗೊಳ್ಳುವ ಸಾಧ್ಯತೆ ಕಂಡು ಬಂದಿದೆ.
ಹಿಂದೆ ಶಂಕರಮೂರ್ತಿ ಅವರು ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಳ್ಳುವ ಸುಳಿವು ಸಿಕ್ಕಿದ ಕೂಡಲೇ ಆಗಿನ ಮುಖ್ಯ ಮಂತ್ರಿ ಜೆ. ಜಯಲಲಿತಾ ಅವರು ಆಕ್ಷೇಪ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ ಕನ್ನಡಿಗ ರಾಜ್ಯಪಾಲರನ್ನು ತಮಿಳುನಾಡು ರಾಜ್ಯಕ್ಕೆ ನೇಮಕ ಮಾಡದಂತೆ ಜಯಲಲಿತಾ ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರು. ಈ ಕಾರಣದಿಂದಾಗಿ ಶಂಕರಮೂರ್ತಿ ಅವರಿಗೆ ತಮಿಳುನಾಡು ರಾಜ್ಯಪಾಲ ಹುದ್ದೆ ಕೈ ತಪ್ಪಿತ್ತು.
ಇದೀಗ ಶಂಕರಮೂರ್ತಿ ಅವರಿಗೆ ಡಿ.೨೯ರಂದು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲು ಸಿದ್ದರಾಗಿರುವಂತೆ ಕೇಂದ್ರದಿಂದ ಸೂಚನೆ ಬಂದಿದೆ. ಅಂಧ್ರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ರಾಜ್ಯಪಾಲರ ಹುದ್ದೆ ಖಾಲಿ ಇದೆ. ಈ ಮೂರು ರಾಜ್ಯಗಳಲ್ಲಿ ಯಾವುದಾದರೂ ಒಂದು ರಾಜ್ಯದ ರಾಜ್ಯಪಾಲರ ಹುದ್ದೆ ಸಿಗುವ ಸಾಧ್ಯತೆ ಇದೆ.
ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರನ್ನು ಇಂದು ಭೇಟಿಯಾಗಿರುವ ಡಿಎಚ್ ಶಂಕರಮೂರ್ತಿ ದಕ್ಷಿಣ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಲು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.