ಕಂಪ್ಯೂಟರ್ ಕಳ್ಳತನ
Update: 2016-12-23 22:53 IST
ತೀರ್ಥಹಳ್ಳಿ, ಡಿ. 23: ತಾಲೂಕಿನ ಕೋಣಂದೂರಿನ ನಾಡ ಕಚೆೇರಿಯಲ್ಲಿ ಗುರುವಾರ ರಾತ್ರಿ ಕಂಪ್ಯೂಟರ್ ಕಳ್ಳತನವಾದ ಬಗ್ಗೆ ವರದಿಯಾಗಿದೆ.
ಈ ಹಿಂದೆ ಈ ನಾಡ ಕಚೆೇರಿಯಲ್ಲಿ ಹಲವು ಬಾರಿ ಕಳ್ಳತನ ನಡೆದಿದ್ದು, ಅಮೂಲ್ಯವಾದ ದಾಖಲೆ ಪತ್ರಗಳು ಕಳವಾಗಿದ್ದವು.
ಇಲ್ಲಿನ ಸ್ಥಳೀಯರು ಹಾಗೂ ಭೂ ಮಾಫಿಯಾದವರ ಕೈವಾಡವಿರಬಹುದು ಎಂದು ಈ ಭಾಗದ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.