ಬಯೋ ಡೀಸೆಲ್ ಬಸ್‌ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ಬೆಂಗಳೂರು, ಡಿ.24: ದೇಶದಲ್ಲಿಯೇ ಪ್ರಥಮ ಬಾರಿಗೆ ಶೇ.100 ರಷ್ಟು ಬಯೋ ಡೀಸೆಲ್‌ಗೆ ಸೇರಿದ 25 ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಶನಿವಾರ ನಗರದ ಕೆಎಸ್ಸಾರ್ಟಿಸಿ 4ನೆ ಘಟಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 25 ಬಯೋ ಬಸ್‌ಗಳಿಗೆ ಚಾಲನೆ ನೀಡಿದ ಅವರು, ಪರಿಸರ ಮಾಲಿನ್ಯ ತಡೆಗಟ್ಟುವುದು ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಬಯೋ ಬಸ್‌ಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಥಮ ಹಂತವಾಗಿ ಬೆಂಗಳೂರು-ಕುಂದಾಪುರ, ಚೆನೈ, ತಿರುಪತಿ ಹಾಗೂ ಬೀದರ್‌ಗಳಿಗೆ ಈ ಬಸ್‌ಗಳು ಕಾರ್ಯಾರಂಭ ಮಾಡಲಿವೆ. ಈ ಬಸ್‌ಗಳು ಶೇ.100 ರಷ್ಟು ಬಯೋ-ಡೀಸಲ್‌ನಿಂದ ಚಾಲಿತವಾಗುವಂತಹ ತಂತ್ರಜ್ಞಾನವನ್ನು ಹೊಂದಿದ್ದು, ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಾಕಷ್ಟು ಕೊಡುಗೆ ನೀಡಲಿವೆ ಎಂದು ತಿಳಿಸಿದರು.
ಬಸ್‌ನ ವಿಶೇಷತೆಗಳು:
- ಅತ್ಯುತ್ತಮ ಸುರಕ್ಷಿತೆ ಹೊಂದಿರುವ ಬಸ್‌ಗಳು ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದರಿಂದ ದೃಢೀಕರಿಸಲ್ಪಟ್ಟಿದೆ.
- ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯಾಣಿಕರಿಗೆ ಅಲಾರಾಂ ಹಾಗೂ ಬಾಗಿಲನ್ನು ತೆರೆಯುವಿಕೆಯ ವ್ಯವಸ್ಥೆಯಿದೆ. -ಅಗ್ನಿನಿರೋಧಕ ಸಾಮಗ್ರಿಗಳಿಂದ ವಾಹನ ನಿರ್ಮಾಣ.
-ವಾಹನದ ಮುಂಭಾಗ ಹಾಗೂ ಹಿಂಭಾಗದಲ್ಲಿ ವಿಶಾಲವಾದ ಎಲ್‌ಇಡಿ ನಾಮಫಲಕಗಳ ಅಳವಡಿಕೆ.
-ಪ್ರತಿ ಪ್ರಯಾಣಿಕರ ಆಸನಗಳ ಸಾಲಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜರ್‌ಗಳಿಗೆ ಅಳವಡಿಕೆ.
- ಪ್ರಯಾಣಿಕರ ಮನೋರಂಜನೆಗಾಗಿ ಡಿವಿಡಿ ಪ್ಲೇಯರ್ ವ್ಯವಸ್ಥೆಯಿದೆ.