×
Ad

ಸ.ಕ. ಇಲಾಖೆಯಿಂದ ದಿಡ್ಡಳ್ಳಿಗೆ ಮೂಲಭೂತ ಸೌಲಭ್ಯ

Update: 2016-12-24 22:44 IST

ಮಡಿಕೇರಿ, ಡಿ.24: ಕಳೆದ ಎರಡು ವಾರಗಳಿಂದ ಅಸಮಾಧಾನ, ಅಸಹಾಯಕತೆ, ಆಕ್ರೋಶ, ಕ್ರಾಂತಿಗೀತೆಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ದಿಡ್ಡಳ್ಳಿಯ ಗಿರಿಜನರು ಡಿ.23 ರಂದು ಸರಕಾರ ನೀಡಿದ ಭರವಸೆಯಿಂದ ಕೊಂಚ ಆತ್ಮವಿಶ್ವಾಸದ ನಡೆಯನ್ನು ಪ್ರದರ್ಶಿಸುತ್ತಿದ್ದಾರೆ.


ಗುಡಿಸಲುಗಳ ತೆರವಿನಿಂದ ನಿರಾಶ್ರಿತರಾಗಿದ್ದ 577 ಕುಟುಂಬಗಳ ಗಿರಿಜನ ಸದಸ್ಯರು ಇದೀಗ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಆದೇಶದ ಮೇರೆಗೆ ಇಲಾಖೆಯ ವತಿಯಿಂದ ನಿರಾಶ್ರಿತ ಆದಿವಾಸಿಗಳಿಗೆ ದಿನದ ಮೂರು ಹೊತ್ತು ಆಹಾರ ನೀಡಲಾಗುತ್ತಿದೆ. ಅಲ್ಲದೆ, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ದಿಡ್ಡಳ್ಳಿ ಆಶ್ರಮ ಶಾಲೆಯ ಸಮೀಪದಲ್ಲೇ ವೈದ್ಯಕೀಯ ಕೇಂದ್ರವನ್ನು ಆರಂಭಿಸಲಾಗಿದ್ದು, ಸೋಮವಾರದಿಂದ ಮಕ್ಕಳಿಗೆ ಅಂಗನವಾಡಿ ಆರಂಭಿ ಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾ ಖೆಯ ಅಧಿಕಾರಿಗಳು ತಿಳಿಸಿದ್ದಾರೆ.


ನಿಷೇಧಾಜ್ಞೆ ಮುಂದುವರಿಕೆ
ಡಿ.31ರ ವರೆಗೆ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಸೆಕ್ಷನ್ 144ರ ಅನ್ವಯ ಸ್ಥಳೀಯರಿಗಲ್ಲದೆ ಹೊರಗಿನವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಕ್ಸಲ್ ನಿಗ್ರಹದ ದಳ ಠಿಕಾಣಿ
ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ದಳದ 2 ವಾಹನಗಳು ಹಾಗೂ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿದ್ದು, ನಿರಾಶ್ರಿತರಿಗೆ ಭದ್ರತೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News