ಗಂಡನಿಂದಲೇ ಹೆಂಡತಿಯ ಕೊಲೆ

Update: 2016-12-26 17:08 GMT

ಯಾದಗಿರಿ, ಡಿ.26 : ಗಂಡನೇ  ಹೆಂಡತಿಯನ್ನು ಕೊಲೆಗೈದ ಘಟನೆ ಇಂದಿಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಲಕ್ಷ್ಮಿ ಮಡಗನವರ (21) ಎಂದು ಗುರುತಿಸಲಾಗಿದೆ.

ಗಂಡ ರಮೇಶ ಹಾಗೂ ಕುಟುಂಬದವರಿಂದ ಕೃತ್ಯ ನಡೆದಿದ್ದು , ವರದಕ್ಷಿಣೆಗಾಗಿ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.

ಕೊಲೆಗೈದ  ಗಂಡ ರಮೇಶ ಪರಾರಿಯಾಗಿದ್ದು, ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಈ ಬಗ್ಗೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News