ಟೆಂಪೊ-ಬಸ್ ಮುಖಾಮುಖಿ ಢಿಕ್ಕಿ
Update: 2016-12-26 23:00 IST
ಸಾಗರ, ಡಿ.26: ತಾಲೂಕಿನ ತುಮರಿ,ಸುಳ್ಳಳ್ಳಿ ಸಮೀಪದ ಆಡುಗಳಲೆ ಗ್ರಾಮದ ಬಳಿ ಟೆಂಪೊ ಟ್ರಾವೆಲ್ ಹಾಗೂ ಖಾಸಗಿ ಬಸ್ ನಡುವೆ ರವಿವಾರ ಸಂಭವಿಸಿದ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು,ನಾಲ್ವರು ಗಂಭೀಗಾಯಗೊಂಡಿದ್ದಾರೆ. ಮೈಸೂರಿನಿಂದ ಕೊಲ್ಲೂರು ನೋಡಿಕೊಂಡು ಸಿಗಂದೂರಿಗೆ ಬರುತ್ತಿದ್ದ ಟೆಂಪೊ ಟ್ರಾವೆಲರ್ಸ್ ವಾಹನವು ಹೊಸಕೊಪ್ಪಕ್ಕೆ ಬರುತ್ತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಟೆಂಪೊ ಟ್ರಾವೆಲರ್ಸ್‌ನಲ್ಲಿದ್ದ ಮೈಸೂರು ನಿವಾಸಿ ಭಾಗ್ಯಮ್ಮ (40) ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟೆಂಪೋ ಟ್ರಾವೆಲರ್ಸ್‌ನಲ್ಲಿ ಒಟ್ಟು 13ಜನ ಪ್ರಯಾಣಿಕರು ಇದ್ದರು. ಅಪಘಾತದಲ್ಲಿ ಖಾಸಗಿ ಬಸ್ ಚಾಲಕ ಸೇರಿದಂತೆ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ 3ಜನರನ್ನು ಕುಂದಾ ಪುರ ಸರಕಾರಿ ಆಸ್ಪತ್ರೆಗೆ ಹಾಗೂ 3ಜನರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.