ಮೇಟಿ ರಾಸಲೀಲೆ ಪ್ರಕರಣ : ಆಕ್ಷೇಪಣಾ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ ಸಿಐಡಿ ತಂಡ
Update: 2016-12-28 18:12 IST
ಬೆಂಗಳೂರು, ಡಿ. 28 : ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ಮೇಟಿ ವಿರುದ್ದ ಆರೋಪ ಮಾಡುವಂತೆ ಸಂತ್ರಸ್ಥ ಮಹಿಳೆಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು , ಅದರ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಲು ಸಿಐಡಿ ತಂಡ ಕಾಲಾವಕಾಶ ಕೋರಿದೆ.
ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ,ತಕರಾರು ಇದ್ದರೆ ಅರ್ಜಿ ಸಲ್ಲಿಸಲು ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ಸಿಐಡಿ ಗೆ ಸೂಚಿಸಿತ್ತು . ಅದರಂತೆ ಸಿಐಡಿ ಡಿವೈ ಎಸ್ ಪಿ ರವಿಶಂಕರ್ ನೇತೃತ್ವದ ತಂಡ ವು ಜ.4 , 2017ರವರೆಗೆ ಕಾಲಾವಕಾಶ ಕೋರಿದೆ.
ಇದು ಸಂತ್ರಸ್ಥ ಮಹಿಳೆಯು ನವನಗರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 17, 2016 ರಲ್ಲಿ ದಾಖಲಿಸಿದ್ದ ದೂರು ಪ್ರಕರಣವಾಗಿದೆ.