×
Ad

ಭೀಮಾನಾಯ್ಕಗೆ ಜಾಮೀನು: ಮತ್ತೆ ಬಂಧನ

Update: 2016-12-29 22:57 IST

ಮಂಡ್ಯ, ಡಿ.29: ಕಾರು ಚಾಲಕ ಕಾಡುಕೊತ್ತನಹಳ್ಳಿಯ ರಮೇಶ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಬೆಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ಕ ಹಾಗೂ ಅವರ ಕಾರು ಚಾಲಕ ಮುಹಮ್ಮದ್ ಅವರಿಗೆ ಗುರುವಾರ ಜಾಮೀನು ದೊರೆತರೂ, ಮತ್ತೊಂದು ಪ್ರಕರಣದಲ್ಲಿ ಮತ್ತೆ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರಿ ಮದುವೆಗೆ ನೂರು ಕೋಟಿ ರೂ. ಕಪ್ಪುಹಣವನ್ನು ಬಿಳಿ ಮಾಡಿಕೊಟ್ಟ ಆರೋಪ ಸೇರಿದಂತೆ ಹಲವು ಭ್ರಷ್ಟಾಚಾರಗಳ ಬಗ್ಗೆ ರಮೇಶ್ ತನ್ನ ಡೆತ್‌ನೋಟ್‌ನಲ್ಲಿ ಭೀಮಾನಾಯ್ಕ ವಿರುದ್ಧ ಆರೋಪಗಳನ್ನು ಬರೆದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭೀಮಾನಾಯ್ಕ, ಮುಹಮ್ಮದ್ ಜೈಲಿನಲ್ಲಿದ್ದರು.

ಗುರುವಾರ ನಗರದ 5ನೆ ಎಡಿಜೆ ಕೋರ್ಟ್ ನ್ಯಾಯಾಧೀಶ ರೆಹಮಾನ್ 1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಇಬ್ಬರು ಸ್ಥಳೀಯರ ಜಾಮೀನಿನ ಮೇಲೆ ಭೀಮಾನಾಯ್ಕ್ಕ, ಮುಹಮ್ಮದ್‌ಗೆ ಜಾಮೀನು ನೀಡಿದರು. ಆದರೆ, ರಮೇಶ್ ಗೆಳೆಯ ರಾಮನಗರದ ಸುರೇಶ್ ಅವರು ನೀಡಿದ್ದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪೊಲೀಸರು ಬಂಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News