×
Ad

ಹೊರಗಿನಿಂದ ಬಂದವರಿಗೆ ವಸತಿ ಸೌಲಭ್ಯವಿಲ್ಲ: ಸಚಿವ ಸೀತಾರಾಮ್

Update: 2016-12-30 15:13 IST

ಬೆಂಗಳೂರು, ಡಿ.30: ದಿಡ್ಡಳ್ಳಿ ಪ್ರದೇಶದಲ್ಲಿ ಈವರೆಗೆ ವಾಸವಾಗಿರುವ ಬಗ್ಗೆ ಜ.31ರೊಳಗಾಗಿ ಗುರುತಿನ ಚೀಟಿ ನೀಡಿದವರಗೆ ಸರಕಾರ ವಸತಿ ಸೌಲಭ್ಯವನ್ನು ಕಲ್ಪಿಸಲಿದೆ ಎಂದು ಕೊಡಗು ಜಿಲ್ಲೆ ಉಸ್ತುವಾರಿ ಸಚಿವ  ಸಚಿವ ಎಂ.ಆರ್ ಸೀತಾರಾಮ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಮೊದಲು ದಿಡ್ಡಳ್ಳಿ ಪ್ರದೇಶದಲ್ಲಿ 199 ಕುಟುಂಬ ಮಾತ್ರ ಇದ್ದವು. ಈಗ 572 ಕುಟುಂಬಗಳಾಗಿವೆ. ನುಸುಳುಕೋರರ ಬಗ್ಗೆ ಮಾಹಿತಿ ಇದ್ದು ಎಲ್ಲವನ್ನೂ ಪರಿಶೀಲಿಸಿ ಅಸಲಿ ಆದಿವಾಸಿಗಳಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಆದಿವಾಸಿಗಳು ಸ್ಥಳೀಯರೆಂಬುದಕ್ಕೆ ಆಧಾರವಾಗಿ ಯಾವುದಾದರೂ ಗುರುತಿನ ಚೀಟಿ ಇರಬೇಕು. ಗುರುತಿನ ಆಧಾರ ಒದಗಿಸಲು ಜ.31 ರವರೆಗೆ ಅವಕಾಶ ನೀಡಲಾಗಿದ್ದು, ಹೊರಗಿನಿಂದ ಬಂದವರಿಗೆ ವಸತಿ ಸೌಲಭ್ಯ ಕಲ್ಪಿಸುವುದಿಲ್ಲ ಎಂದು ಸೀತಾರಾಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News