ಸಿಎಂ ಇಬ್ರಾಹೀಂ ಕಾಂಗ್ರೆಸ್‌ಗೆ ಟಾಟಾ?
Update: 2016-12-30 18:48 IST
ಮಂಗಳೂರು,ಡಿ.30: ಮಾಜಿ ಕೇಂದ್ರ ಸಚಿವ, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಸಿಎಂ ಇಬ್ರಾಹೀಂ ಕಾಂಗ್ರೆಸ್ ತೊರೆಯಲಿದ್ದಾರೆಂದು ಕೇರಳ ಮೂಲದ ಸುದ್ದಿಪೋರ್ಟಲೊಂದು ವರದಿ ಮಾಡಿದೆ. ಅವರು ಜಾತ್ಯತೀತ ಜನತಾ ದಳಕ್ಕೆ ಅವರು ಮರಳಲಿದ್ದಾರೆ ಎಂದು ಹೇಳಲಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷನ ಹುದ್ದೆ ಹಾಗೂ ಚುನಾವಣೆಯಲ್ಲಿ ಅವರು ಬಯಸುವ ಕ್ಷೇತ್ರದಿಂದ ಟಿಕೆಟ್ ನೀಡಲು ಜೆಡಿಎಸ್ ನಲ್ಲಿ ಸಹಮತ ಏರ್ಪಟ್ಟಿದೆ ಎನ್ನಲಾಗಿದೆ.
2005ರಲ್ಲಿ ಇಬ್ರಾಹೀಂ ಹಾಗೂ ಸಿದ್ದರಾಮಯ್ಯ ಜನತಾದಳ ತೊರೆದು ಕಾಂಗ್ರೆಸ್ ಸೇರಿದ್ದರು. ಸಿದ್ದರಾಮಯ್ಯ ಕರ್ನಾಟಕ ಮುಖ್ಯಮಂತ್ರಿ ಆಗಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯವಿರುದ್ಧ ಇಬ್ರಾಹೀಂ ಬಹಿರಂಗ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದರು. ಜನತಾ ಪಕ್ಷದಿಂದ 1978ರಲ್ಲಿ ಅವರು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 1980ಕ್ಕೆ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಮಾಜಿಮುಖ್ಯಮಂತ್ರಿ ಆರ್.ಗುಂಡುರಾವ್ ಬಲಗೈಯೆನಿಸಿಕೊಂಡರು. ಅವರ ಸಂಪುಟದಲ್ಲಿ ಸಚಿವನೂ ಆಗಿದ್ದರು.