ಹನಾಕಾಝಿಯಾ, ಖದೀಜಾರುಕ್ನುದ್ದೀನ್‌ಗೆ ನಜ್ಮೆ ಇಖ್ವಾನ್ ಚಿನ್ನದ ಪದಕ
Update: 2016-12-30 22:54 IST
ಭಟ್ಕಳ,ಡಿ.30: ಇಲ್ಲಿನ ಜಾಮಿ ಯಾಬಾದ್ ರಸ್ತೆಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ವಿಭಾಗದಲ್ಲಿ ಹನಾ ಕಾಝಿಯಾ ಹಾಗೂ ಖದೀಜಾ ರುಕ್ನುದ್ದೀನ್‌ರಿಗೆ ಪ್ರತಿಷ್ಠಿತ ನಜ್ಮೆ ಇಖ್ವಾನ್ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಪದಕ ಪ್ರದಾನ ಮಾಡಿ ಮಾತನಾಡಿದ ಕಾರವಾರ ಜಿಲ್ಲಾಧಿ ಕಾರಿ ಕಚೇರಿಯ ಐಎಎಸ್ ಫೌಝಿಯಾತರನ್ನುಮ್, ವಿದ್ಯಾರ್ಥಿ ನಿಯರಲ್ಲಿರುವ ಪ್ರತಿಭೆಯನ್ನು ಪೋಷಿಸಿ ಬೆಳೆಸುವುದು ಪಾಲಕ ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ.
ಸಮುದಾಯದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರುವಂತೆ ಅವರು ಮಹಿಳೆಯರಿಗೆ ಕರೆ ನೀಡಿದರು.
ಪ್ರಾಂಶುಪಾಲೆ ಫಹಮಿದಾಡಾಟಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.