ಅಕ್ರಮ ಮದ್ಯ: ಆರೋಪಿಯ ಬಂಧನ
Update: 2016-12-30 23:05 IST
ಚಿಕ್ಕಮಗಳೂರು, ಡಿ.30: ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದ ಆರೋಪದಡಿ ಆರೋಪಿಯೋರ್ವನನ್ನು ಕಳಸ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಬಂಧಿತನನ್ನು ಮಾವಿನಕೆರೆ ಗ್ರಾಮದ ನಿವಾಸಿ ಎಚ್.ಸಿ.ಭಾಸ್ಕರ್(38) ಎಂದು ಗುರುತಿಸಲಾಗಿದೆ.
ಈತ ತೋಡ್ಲು ಗ್ರಾಮದಲ್ಲಿ ಅಕ್ರಮ ಮದ್ಯವನ್ನು ತನ್ನ ಮೋಟಾರ್ ಸೈಕಲ್‌ನಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.ಆರೋಪಿಯಿಂದ 1,273 ರೂ. ವೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.