×
Ad

​ವಿಷ ಸೇವಿಸಿ ಯುವಕ ಆತ್ಮಹತ್ಯೆ

Update: 2016-12-30 23:05 IST

ಮೂಡಿಗೆರೆ, ಡಿ.30: ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಸರ್ವೋದಯ ನಗರ ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಸರ್ವೋದಯ ನಗರದ ನಿವಾಸಿ ನವೀನ(25) ಎಂದು ಗುರುತಿಸಲಾಗಿದೆ.

ಯುವಕ ನವೀನನಿಗೆ ಅತಿಯಾದ ಕುಡಿತದ ಚಟವಿದ್ದು, ಮದುವೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರಿ ಶಕುಂತಲಾ ನೀಡಿರುವ ದೂರಿನನ್ವಯ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News