ಹೋರಿ ಬೆದರಿಸುವ ಸ್ಪರ್ಧೆ : ಇಬ್ಬರ ದಾರುಣ ಸಾವು
Update: 2017-01-02 21:57 IST
ಸೊರಬ ,ಜ.2 : ಹೋರಿ ಬೆದರಿಸುವ ಸ್ಪರ್ಧೆ ವೇಳೆ ಇಬ್ಬರು ಯುವಕರು ಮೃತಪಟ್ಟ ಘಟನೆ ಸೋಮವಾರ ತಾಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಶಕುನವಳ್ಳಿ ಗ್ರಾಮದ ಮನೋಜ್ (17) ಹಾಗೂ ನೆರೆಯ ಹಾನಗಲ್ ತಾಲೂಕಿನ ಶಿರವಾಡಿ ಗ್ರಾಮದ ಹೇಮಂತ್ (23) ಮೃತ ದುರ್ದೈವಿಗಳು.
ಹೋರಿ ಬೆದರಿಸುವುದನ್ನು ನೋಡುತ್ತಿದ್ದ ಸಂದರ್ಭದಲ್ಲಿ ಹೋರಿ ಇವರಿಗೆ ತಿವಿದ ಪರಿಣಾಮ ತೀವ್ರ ರಕ್ತಸಾವ್ರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತರಾಗಿದ್ದಾರೆ.
ಹೋರಿ ಬೆದರಿಸಲು ಯಾವುದೇ ಪರವಾನಿಗೆಯನ್ನು ಪೊಲೀಸ್ ಇಲಾಖೆ ನೀಡಿಲ್ಲ ಎನ್ನಲಾಗಿದ್ದು, ಪ್ರಕರಣ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.