×
Ad

​ಹಳೇ ದ್ವೇಷದಿಂದ ಗುಂಡೇಟುವ್ಯಕ್ತಿ ಪ್ರಾಣಾಪಾಯದಿಂದ ಪಾರು

Update: 2017-01-02 23:29 IST

ಕುಶಾಲನಗರ,ಜ.2: ಹೊಸ ವರ್ಷಾಚರಣೆ ಮುಗಿಸಿ ತನ್ನ ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ, ಹಳೆಯ ಸೇಡು ತೀರಿಸುವ ಸಲುವಾಗಿ ಗುಂಡು ಹಾರಿಸಿದ ಘಟನೆ ಕುಶಾಲನಗರ ಸಮೀಪದ ಗುಡ್ಡೇಹೊಸೂರಿನಲ್ಲಿ ನಡೆದಿದೆ.

ಮೈಸೂರಿನ ನಿವಾಸಿ ಕಿರಣ್ ಎಂಬವರು ಗುಂಡೇಟಿಗೀಡಾದ ವ್ಯಕ್ತಿ. ಡಿ. 31 ರಂದು ನಂಜರಾಯಪಟ್ಟಣದಲ್ಲಿರುವ ತನ್ನ ಸ್ನೇಹಿತ ರಾಕೇಶ್‌ರವರ ಮನೆಯಲ್ಲಿ ಹೊಸ ವರ್ಷವನ್ನು ಆಚರಿಸಲು ತೆರಳುವ ಸಂದರ್ಭ ಹಿಂದಿನಿಂದ ಬಂದ ಕಾರೊಂದು ಸೈಡು ಕೊಡುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ನಂತರ ಜ. 1 ರಂದು ರಾಕೇಶ್ ಅವರು ಹಾಗೂ ಅವರ ಸ್ನೇಹಿತರು ಕಿರಣ್‌ರವರನ್ನು ಮೈಸೂರಿಗೆ ಬಿಡಲು ಕುಶಾಲನಗರದ ಕಡೆಗೆ ತೆರಳುವ ಸಂದರ್ಭ ನಿನ್ನೆ ದಿನ ಗಲಾಟೆ ಮಾಡಿದ್ದ ಕೆಬಿನ್ ಹಾಗೂ ಬಿದ್ದಪ್ಪ ಎಂಬವರು ಹಳೆಯ ಗಲಾಟೆಯನ್ನು ಕೆರಳಿಸಿದ್ದು, ಬಳಿಕ ಕಾರಿನಲ್ಲಿದ್ದ ರಿವಾಲ್ವರನ್ನು ತೆಗೆದು ಕಿರಣ್‌ರವರಿಗೆ ಗುಂಡನ್ನು ಹಾರಿಸಿದರು ಎನ್ನಲಾಗಿದೆ. ಕಿರಣ್‌ರವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News