×
Ad

ಟ್ರ್ಯಾಕ್ಸ್-ಕಾರು ಢಿಕ್ಕಿ: ಇಬ್ಬರು ಗಂಭೀರ

Update: 2017-01-02 23:30 IST

ಮುಂಡಗೋಡ,ಜ.2: ಟ್ರಾಕ್ಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಟ್ರಾಕ್ಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿ-ಶಿರಸಿರಸ್ತೆ ರಾಮಣ್ಣ ಮನೆ ಕ್ರಾಸ್ ಹತ್ತಿರ ರವಿವಾರ ಸಂಭವಿಸಿದೆ.


 ಗಾಯಗೊಂಡವರನ್ನು ಧಾರವಾಡದ ಚನ್ನಬಸಪ್ಪಾ ಗಾಳಿ, ಸುದರ್ಶನ ಅಸಟ್ಟಿ ಎಂದು ಹೇಳಲಾದೆ. ಕಾರು ಮುಂಡಗೋಡ ಮಾರ್ಗವಾಹುಬ್ಬಳ್ಳಿ ದಿಕ್ಕಿಗೆ ಹೊರಟಿದ್ದಾಗ ಎದುರಗಡೆಯಿಂದ ಬಂದ ಟ್ರಾಕ್ಸ್ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಟ್ರಾಕ್ಸ್ ಪಲ್ಟಿಯಾದ ಪರಿಣಾಮ ಟ್ರಾಕ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯವಾದರೆ ,ಒಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುವನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಕಾರು ಚಾಲಕ ಶ್ರೇಯಸ್ ಪಾಯಿದೇ ವಿರುದ್ಧ ಟ್ರಾಕ್ಸ್ ಚಾಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News