×
Ad

ಪಾದಾಚಾರಿಗೆ ಲಾರಿ ಢಿಕ್ಕಿ ಹೊಡೆದು ದುರ್ಮರಣ

Update: 2017-01-04 21:12 IST

ಕುಶಾಲನಗರ , ಜ.4 : ಪಾದಾಚಾರಿಗೆ ಲಾರಿ ಢಿಕ್ಕಿ ಹೊಡೆದು ಪಾದಾಚಾರಿ ದುರ್ಮರಣ ಹೊಂದಿದ ಘಟನೆ ಸಮೀಪದ ತೊರೆನೂರಿನ ಅರಿಷಿನಗುಪ್ಪೆಯಲ್ಲಿ ನಡೆದಿದ್ದು, ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 37 ವರ್ಷ ಪ್ರಾಯದ ಅರುಣಾ ಮೃತ ದುರ್ದೈವಿ. ತೊರೆನೂರಿನ ಅರಷಿನಗುಪ್ಪೆ ನಿವಾಸಿಗಳಾದ ಜೌರಯ್ಯ ಹಾಗೂ ಜೌರಮ್ಮನವರ ಪುತ್ರನಾದ ಅರುಣಾರವರು, ತನ್ನ ಹೆಂಡತಿ ಹಾಗೂ ತಂದೆ ತಾಯಿಯರನ್ನು ಅಗಲಿದ್ದಾರೆ.

ಕೂಲಿ ಕೆಲಸ ನಿರ್ವಹಿಸುತ್ತಿದ್ದ ಅರುಣಾರವರು, ಕೆಲಸ ಮುಗಿಸಿ ತೆರಳುವ ಸಮಯ ಘಟನೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಚಾಲಕ ತಾನಾಗಿಯೇ ಠಾಣೆಗೆ ಆಗಮಿಸಿ ಮಾಹಿತಿ ನೀಡಿದ್ದು, ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News