×
Ad

ಜ.7,8 ರಂದು ಇಂಡೋ-ನೇಪಾಳ್ ಓಪನ್ ಕರಾಟೆ ಪಂದ್ಯ

Update: 2017-01-05 17:48 IST

ಹಾಸನ,ಜ.5: ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಇಂಡೋ-ನೇಪಾಳ್ ಓಪನ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ನಗರದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಾಸನ್ ಜಿಲ್ಲಾ ಕರಾಟೆ ಸಂಘದ ಅಧ್ಯಕ್ಷ ಮಹಮದ್ ಆರೀಫ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಹಾಸನ್ ಜಿಲ್ಲಾ ಕರಾಟೆ ಅಸೋಸಿಯೇಷನ್‌ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸುವರು. ಕರಾಟೆಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ನೆರವೇರಿಸಲಿದ್ದಾರೆ. ಶಾಸಕ ಹೆಚ್.ಎಸ್. ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಇತರರು ಪಾಲ್ಗೊಳ್ಳುವುದಾಗಿ ಹೇಳಿದರು.

ಸುಮಾರು 400 ರಿಂ 600ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಪಂದ್ಯಾವಳಿಯನ್ನು ಆಧುನಿಕ ತಂತ್ರಜ್ಞಾನ ಮತ್ತು ವರ್ಲ್ಡ್ ಕರಾಟೆ ಫೆಡರೇಷನ್‌ನ ನಿಯಮ ಬಳಸಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 7 ವರ್ಷದಿಂದ 35 ವರ್ಷದವರೆಗಿನ ಹಾಗೂ 20 ಕೆ.ಜಿ. ಯಿಂದ 75 ಕೆ.ಜಿ. ವರೆಗೂ ಮೇಲ್ಪಟ್ಟ ಸ್ಪರ್ದಿಗಳು ಭಾಗವಹಿಸಬಹುದು ಎಂದು ಹೇಳಿದರು. ಇಂಡೋ-ನೇಪಾಳ್ ಓಪನ್ ಕರಾಟೆ ಪಂದ್ಯಾವಳಿ 2017 ಈಗ ದೇಶ ಕರಾಟೆ ಪಟುಗಳಲ್ಲಿ ಸಂಚಲನ ಮೂಡಿಸಿದೆ. ಕ್ರೀಡಾ ಕೂಟ ಸಮಗ್ರ ವ್ಯವಸ್ಥೆಗೆ ಒಟ್ಟು 4 ಲಕ್ಷ ರೂ. ವೆಚ್ಚ ತಗಲಲಿದೆ ಎಂದು ವಿವರಿಸಿದರು. ಹೆಚ್ಚಿನ ಮಾಹಿತಿಗಾಗಿ 8123114533 ಹಾಗೂ 8951964789 ಗೆ ಸಂಪರ್ಕಿಸಬಹುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಹಾಸನ್ ಜಿಲ್ಲಾ ಕರಾಟೆ ಅಸೋಸಿಯೇಷನ್‌ನ ಸಯ್ಯಿದ್ ಮುಬಾರಕ್, ಶುಭಾವನ್, ಶಾರಕ್, ನಸ್ವರತ್ ಅರಸ್, ಅಶ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News